Advertisement

ಪ್ರಜಾ ಸೇವಾ (iPGRS) ದೂರುಗಳು ಇನ್ನು ಸಕಾಲ ವ್ಯಾಪ್ತಿಗೆ; ವಿಳಂಬ ಮಾಡಿದ ಅಧಿಕಾರಿಗಳಿಂದಲೇ ರೂ. 1,500 ವರೆಗೆ ಪರಿಹಾರ ವಸೂಲಿ-Praja Seva (iPGRS) complaints now under Sakala ambit; up to Rs. 1,500 compensation to be recovered from delaying officials themselves

 SUDDILIVE || SHIVAMOGGA

ಪ್ರಜಾ ಸೇವಾ (iPGRS) ದೂರುಗಳು ಇನ್ನು ಸಕಾಲ ವ್ಯಾಪ್ತಿಗೆ; ವಿಳಂಬ ಮಾಡಿದ ಅಧಿಕಾರಿಗಳಿಂದಲೇ ರೂ. 1,500 ವರೆಗೆ ಪರಿಹಾರ ವಸೂಲಿ-Praja Seva (iPGRS) complaints now under Sakala ambit; up to Rs. 1,500 compensation to be recovered from delaying officials themselves

Ipgrs, sakala

ಸಾರ್ವಜನಿಕರ ಕುಂದುಕೊರತೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಜಾ ಸೇವಾ (iPGRS) ಪೋರ್ಟಲ್‌ನಲ್ಲಿ ನೋಂದಣಿಯಾಗುವ ಎಲ್ಲಾ ಸಾರ್ವಜನಿಕ ದೂರುಗಳನ್ನು ಇನ್ನು ಮುಂದೆ *ಕರ್ನಾಟಕ ಸಕಾಲ ಸೇವೆಗಳ ಕಾಯ್ದೆ, 2011* ರ ವ್ಯಾಪ್ತಿಗೆ ತರಲಾಗಿದೆ. ನವೆಂಬರ್ 19ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ.

1902 ಸಹಾಯವಾಣಿ, ವಾಟ್ಸಾಪ್, ಸಾಮಾಜಿಕ ಮಾಧ್ಯಮ, ಸರ್ಕಾರಿ ಕಚೇರಿ, ನಾಗರಿಕ ಸೇವಾ ಕೇಂದ್ರ ಅಥವಾ ಜನ ಸಭೆಗಳ ಮೂಲಕ ಸಲ್ಲಿಸುವ ಎಲ್ಲಾ ದೂರುಗಳಿಗೂ ಈ ನಿಯಮ ಅನ್ವಯವಾಗಲಿದೆ. ಎಲ್ಲಾ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಇದರ ವ್ಯಾಪ್ತಿಗೆ ಬರುತ್ತವೆ.

21 ದಿನಗಳಲ್ಲಿ ಪರಿಹಾರ ಕಡ್ಡಾಯ:

  • - L1 ಅಧಿಕಾರಿ - ದೂರು ಸಿಕ್ಕ 21 ದಿನಗಳಲ್ಲಿ ಪರಿಹಾರ ನೀಡಬೇಕು
  • - ತಪ್ಪು ವರ್ಗ / ಇಲಾಖೆ ಆಯ್ಕೆಯಾದರೆ ಮರು ನಿಯೋಜನೆಗೆ +7 ದಿನ, ಒಟ್ಟು 28 ದಿನ ಮೀರುವಂತಿಲ್ಲ
  • - 21 ದಿನದಲ್ಲಿ ಇತ್ಯರ್ಥವಾಗದಿದ್ದರೆ ಸ್ವಯಂಚಾಲಿತವಾಗಿ L2 ಗೆ ಮೇಲ್ಮನವಿ
  • - L2 ನಲ್ಲೂ ಪರಿಹಾರ ಸಿಗದಿದ್ದರೆ L3 ಮೇಲ್ಮನವಿ ಪ್ರಾಧಿಕಾರಕ್ಕೆ ವರ್ಗಾವಣೆ
  • - ATR ಅಪ್‌ಲೋಡ್ ಮಾಡಿದಾಗ ಮಾತ್ರ ದೂರು ಇತ್ಯರ್ಥ ಎಂದು ಪರಿಗಣನೆ


ಅಧಿಕಾರಿಗಳಿಗೆ ದಂಡ / ಪರಿಹಾರ:

  • - 1-5 ದಿನ ವಿಳಂಬ - ದಿನಕ್ಕೆ ರೂ. 20, ಗರಿಷ್ಠ ರೂ. 100
  • - 6-10 ದಿನ ವಿಳಂಬ - ದಿನಕ್ಕೆ ರೂ. 40, ಗರಿಷ್ಠ ರೂ. 300
  • - 11-15 ದಿನ ವಿಳಂಬ - ದಿನಕ್ಕೆ ರೂ. 60, ಗರಿಷ್ಠ ರೂ. 600
  • - 16-20 ದಿನ ವಿಳಂಬ - ದಿನಕ್ಕೆ ರೂ. 80, ಗರಿಷ್ಠ ರೂ. 1,000
  • - 21-25 ದಿನ ವಿಳಂಬ - ದಿನಕ್ಕೆ ರೂ. 100, ಒಟ್ಟು ಗರಿಷ್ಠ ರೂ. 1,500
  • - ಸೇವೆಯಲ್ಲಿ ಲೋಪ / ತಪ್ಪು ತಿರಸ್ಕಾರಕ್ಕೂ ಗರಿಷ್ಠ ರೂ. 1,500 ಪರಿಹಾರ
  • - ಈ ಮೊತ್ತವನ್ನು ಹೊಣೆಗಾರ ಅಧಿಕಾರಿಗಳಿಂದಲೇ ವಸೂಲಿ ಮಾಡಲಾಗುತ್ತದೆ

ಸುಳ್ಳು ದೂರುದಾರರಿಗೂ ದಂಡ:

ದುರುದ್ದೇಶಪೂರಿತ, ಸುಳ್ಳು ಮತ್ತು ಕಿರುಕುಳಕಾರಿ ದೂರು ಸಲ್ಲಿಸಿದರೆ, ವಿಚಾರಣೆ ನಂತರ ಪ್ರತಿ ಅರ್ಜಿಗೆ *ರೂ. 1,500 ದಂಡ*. ಪುನರಾವರ್ತಿತ ತಪ್ಪಿಗೂ ಅದೇ ದಂಡವನ್ನು ಭೂ ಕಂದಾಯ ಹಿಂಬಾಕಿಯಂತೆ ವಸೂಲಿ ಮಾಡಲಾಗುತ್ತದೆ ಎಂದು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತ ತಿಳಿಸಿದ್ದಾರೆ.





ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು