Advertisement

ಶಿವಮೊಗ್ಗ: ಮ್ಯಾಕ್ಸ್ ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪ; 27 ನಿದ್ದೆ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ! Shivamogga: Woman Attempts Suicide After Taking 27 Sleeping Pills; Makes Serious Allegations Against Max Hospital

SUDDILIVE || SHIVAMOGGA

ಶಿವಮೊಗ್ಗ: ಮ್ಯಾಕ್ಸ್ ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪ; 27 ನಿದ್ದೆ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ! Shivamogga: Woman Attempts Suicide After Taking 27 Sleeping Pills; Makes Serious Allegations Against Max Hospital 

Max, hospitals


ಶಿವಮೊಗ್ಗ: ನಗರದ ಪ್ರತಿಷ್ಠಿತ ಮ್ಯಾಕ್ಸ್ ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಮಹಿಳೆಯೊಬ್ಬರು 27 ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಆಡಳಿತ ಮಂಡಳಿ  ನಿರಂತರ ಕಿರುಕುಳ, ಜೀವ ಬೆದರಿಕೆ ಮತ್ತು ಆರ್ಥಿಕ ಒತ್ತಡ ಎದುರಿಸುತ್ತಿದ್ದೇವೆ ಎಂದು ಆರೋಪಿಸಿರುವ ಮಹಿಳೆ, ತನ್ನ ಸಾವಿಗೆ ಮ್ಯಾಕ್ಸ್ ಆಸ್ಪತ್ರೆಯವರೇ ನೇರ ಕಾರಣ ಎಂದು ಸಾವಿಗೂ ಮುನ್ನ ಬಿಡುಗಡೆಗೂ ಮುನ್ನ ಮಾಡಿದೆ ಎನ್ನಲಾದ ಮೊಬೈಲ್‌ನಲ್ಲಿ ವಿಡಿಯೋವನ್ನೂ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನೇತಾಜಿ ವೃತ್ತದ ನಿವಾಸಿಗಳಾದ ಶುಭಾ ನಾಗರಾಜ್ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ. ಸದ್ಯ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಆಸ್ಪತ್ರೆಯ ಆಡಳಿತ ಮಂಡಳಿಯ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಈ‌ಬಗ್ಗೆ ಸುದ್ದಿಲೈವ್ ಗೆ ಪ್ರತಿಕ್ರಿಯಿಸಿರುವ ವೈದ್ಯ ಡಾ.ನಾಗೇಂದ್ರ ಆಸ್ಪತ್ರೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಆಕ್ಷನ್ ತೆಗೆದುಕೊಳ್ಳಲು ಮುಂದಾದಾಗ ಈ ರೀತಿಯ ಆತ್ಮಹತ್ಯೆಯ ನಾಟಕದ ಯತ್ನವನ್ನ‌ ಮಹಿಳೆ ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ

ಡೆತ್‌ನೋಟ್‌ನಲ್ಲಿ ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪ

ಆತ್ಮಹತ್ಯೆಗೆ ಯತ್ನಿಸುವ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ, "ನನ್ನ ಸಾವಿಗೆ ನೇರ ಕಾರಣ ಮ್ಯಾಕ್ಸ್ ಆಸ್ಪತ್ರೆಯ ಗೂಂಡಾಗಳು" ಎಂದು ಶುಭಾ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ತಮ್ಮ ಸಮಸ್ಯೆ ಕುರಿತು ಪೊಲೀಸರ ಬಳಿಗೆ ಹೋದರೂ ನ್ಯಾಯ ಸಿಗಲಿಲ್ಲ. ಪೊಲೀಸರೂ ಆಸ್ಪತ್ರೆಯವರೊಂದಿಗೆ ಶಾಮೀಲಾಗಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿರುವ ಅವರು, ತಮ್ಮ ಸಾವಿನ ನಂತರ ಪತಿ ನಾಗರಾಜ್ ಹಾಗೂ ಮಗುವಿಗೆ ಏನಾದರೂ ತೊಂದರೆಯಾದರೆ ಅದಕ್ಕೂ ಆಸ್ಪತ್ರೆಯವರೇ ಹೊಣೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಪ್ರಕರಣದ ಹಿನ್ನೆಲೆಯೇನು?

ಶುಭಾ ನಾಗರಾಜ್ ಅವರ ಪತಿ ನಾಗರಾಜ್ ಅವರು 2016ರಿಂದ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. 2026ರ ಮೇ ತಿಂಗಳಲ್ಲಿ ಆಸ್ಪತ್ರೆಯ ಹಣ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು ಎನ್ನಲಾಗಿದೆ.

ಇದಾದ ಬಳಿಕ ನಾಗರಾಜ್ ಮತ್ತು ಅವರ ಕುಟುಂಬಕ್ಕೆ ಆಸ್ಪತ್ರೆಯ ಕಡೆಯವರಿಂದ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂಬುದು ಶುಭಾ ಅವರ ಆರೋಪ.

ನಾಗರಾಜ್ ಅವರು ಎರಡು ಕೋಟಿ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿ ಜೀವ ಬೆದರಿಕೆ ಹಾಕಲಾಗುತ್ತಿತ್ತು. ಅಲ್ಲದೆ, ಮೇ ತಿಂಗಳಲ್ಲಿ ನಾಗರಾಜ್ ಅವರನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಳ್ಳಲಾಗಿತ್ತು. ಮನೆಯ ಬೀರುವಿನ ಕೀಲಿ ಕೈ ನೀಡದಿದ್ದರೆ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮನೆಗೆ ನುಗ್ಗಿ ಚಿನ್ನ, ನಗದು ಹಾಗೂ ವಾಹನಗಳ ಕಳವು ಆರೋಪ

2026ರ ಮೇ 8ರಂದು ಶುಭಾ ಅವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ.

ಈ ವೇಳೆ ಮನೆಯಲ್ಲಿದ್ದ ಸುಮಾರು 400 ಗ್ರಾಂ ಚಿನ್ನಾಭರಣ, 10 ಲಕ್ಷ ರೂಪಾಯಿ ನಗದು, ಮಾಂಗಲ್ಯ ಸರ, ಬಳೆಗಳು, ಸರ ಸೇರಿದಂತೆ ಪತಿ ಮತ್ತು ಮಗುವಿನ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದರೊಂದಿಗೆ ಕುಟುಂಬಕ್ಕೆ ಸೇರಿದ ಬೈಕ್ ಹಾಗೂ ಕಾರುಗಳನ್ನೂ ಅಕ್ರಮವಾಗಿ ತೆಗೆದುಕೊಂಡು ಹೋಗಲಾಗಿದೆ ಎಂದು ಆರೋಪಿಸಿದ್ದಾರೆ. ಟಾಟಾ ಆಲ್ಟ್ರೋಜ್ (KA-14-MB-3582) ಮತ್ತು ಎಂಜಿ ವಿಂಡ್ಸರ್ ಕಾರನ್ನೂ ಕೊಂಡೊಯ್ಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜೀವ ಬೆದರಿಕೆ ಹಾಕಿ ಮೂರು ನಿವೇಶನಗಳ ಕ್ರಯಪತ್ರ?

ಇಷ್ಟಕ್ಕೇ ನಿಲ್ಲದೆ ಕುಟುಂಬದ ಆಸ್ತಿಗಳನ್ನೂ ಬೆದರಿಕೆ ಹಾಕಿ ಪಡೆದುಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

2026ರ ಜುಲೈ 15ರಂದು ತಮ್ಮನ್ನು ಬಲವಂತವಾಗಿ ಉಪನೋಂದಣಾಧಿಕಾರಿ ಕಚೇರಿಗೆ (Sub-Registrar Office) ಕರೆದುಕೊಂಡು ಹೋಗಿ ಮೂರು ನಿವೇಶನಗಳ ಕ್ರಯಪತ್ರ ಮಾಡಿಸಲಾಗಿದೆ ಎಂದು ಶುಭಾ ಆರೋಪಿಸಿದ್ದಾರೆ.

ಆದರ್ಶ ನಗರದಲ್ಲಿ 30x45 ಅಡಿ ನಿವೇಶನ, ಅಣ್ಣಾನಗರದಲ್ಲಿ 30x50 ಅಡಿ ನಿವೇಶನ ಹಾಗೂ ಮತ್ತೊಂದು ಪ್ರದೇಶದಲ್ಲಿರುವ 30x50 ಅಡಿ ನಿವೇಶನವನ್ನು ಜೀವ ಬೆದರಿಕೆ ಹಾಕಿ ತಮ್ಮ ಹೆಸರಿಂದ ವರ್ಗಾಯಿಸಿಕೊಳ್ಳಲಾಗಿದೆ. ಮಗಳ ಜೀವಕ್ಕೂ ಅಪಾಯವಿದೆ ಎಂದು ಹೆದರಿಸಿ ದಾಖಲೆಗಳಿಗೆ ಸಹಿ ಮಾಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬ್ಯಾಂಕ್ ಖಾತೆಯಿಂದ 37.40 ಲಕ್ಷ ರೂ. ವರ್ಗಾವಣೆ ಆರೋಪ

ನಿವೇಶನಗಳ ಕ್ರಯಪತ್ರ ಮಾಡಿಸಿದ ಬಳಿಕ ನಾಗರಾಜ್ ಅವರ ಬ್ಯಾಂಕ್ ಖಾತೆಯಿಂದ ಮೂರು ಪ್ರತ್ಯೇಕ ವಹಿವಾಟುಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

  • ಮೊದಲ ವಹಿವಾಟು: ₹13,50,000
  • ಎರಡನೇ ವಹಿವಾಟು: ₹10,73,000
  • ಮೂರನೇ ವಹಿವಾಟು: ₹13,17,000

ಒಟ್ಟು ₹37,40,000 ಹಣವನ್ನು ಮತ್ತೆ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳಲಾಗಿದೆ ಎಂದು ಶುಭಾ ದೂರಿನಲ್ಲಿ ಆರೋಪಿಸಿದ್ದಾರೆ.

ಪೊಲೀಸರ ವಿರುದ್ಧವೂ ಅಸಮಾಧಾನ

ಈ ಎಲ್ಲ ಘಟನೆಗಳಿಂದ ಬೇಸತ್ತು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದರೂ ನ್ಯಾಯ ದೊರೆಯಲಿಲ್ಲ ಎಂಬುದು ಶುಭಾ ಅವರ ಪ್ರಮುಖ ಆರೋಪವಾಗಿದೆ.

ತಾವು ದೂರು ನೀಡಲು ಹೋದಾಗ ತಮ್ಮ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ. ಶಿವಮೊಗ್ಗದ ಡಿವೈಎಸ್ಪಿ ಅವರು ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದೂ ಶುಭಾ ಆರೋಪಿಸಿದ್ದಾರೆ.

ಆಸ್ಪತ್ರೆಯವರ ಕಿರುಕುಳದ ಜೊತೆಗೆ ಪೊಲೀಸರಿಂದಲೂ ನ್ಯಾಯ ಸಿಗುತ್ತಿಲ್ಲ ಎಂಬ ಭಾವನೆ ಮೂಡಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿರುವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ

ಒಂದು ಕಡೆ ಪ್ರತಿಷ್ಠಿತ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವಿರುದ್ಧ ಹಣಕಾಸು ದುರ್ಬಳಕೆ, ಜೀವ ಬೆದರಿಕೆ, ಚಿನ್ನಾಭರಣ ಹಾಗೂ ವಾಹನಗಳ ಅಪಹರಣ, ಆಸ್ತಿ ವರ್ಗಾವಣೆ ಮತ್ತು ಹಣ ವರ್ಗಾವಣೆ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಮತ್ತೊಂದೆಡೆ ಪೊಲೀಸರ ಕಾರ್ಯವೈಖರಿಯ ಬಗ್ಗೆಯೂ ಮಹಿಳೆ ಪ್ರಶ್ನೆ ಎತ್ತಿದ್ದಾರೆ.

ಆದರೆ, ಇವು ಸದ್ಯ ಮಹಿಳೆ ಮಾಡಿರುವ ಆರೋಪಗಳಾಗಿದ್ದು, ಅವುಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ದೃಢಪಡಬೇಕಿದೆ. ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಆರೋಪಿತ ವ್ಯಕ್ತಿಗಳ ಅಧಿಕೃತ ಪ್ರತಿಕ್ರಿಯೆಯೂ ಲಭ್ಯವಾಗಿಲ್ಲ.

ಮಹಿಳೆಯ ಆತ್ಮಹತ್ಯೆ ಯತ್ನದ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪ್ರಕರಣದ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕಿದೆ.

Shivamogga: Woman Attempts Suicide After Taking 27 Sleeping Pills; Makes Serious Allegations Against Max Hospital

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು