Advertisement

ಪೊಲೀಸರನ್ನು ಕಂಡು ಹೊಟ್ಟೆಗೆ ಚಾಕು ಇರಿದುಕೊಂಡ ರೌಡಿಶೀಟರ್; ಶಿವಮೊಗ್ಗದಲ್ಲಿ ಹೈಡ್ರಾಮಾ!Rowdy-sheeter stabs himself in the stomach upon seeing police; high drama in Shivamogga!

 SUDDILIVE || SHIVAMOGGA

ಪೊಲೀಸರನ್ನು ಕಂಡು ಹೊಟ್ಟೆಗೆ ಚಾಕು ಇರಿದುಕೊಂಡ ರೌಡಿಶೀಟರ್; ಶಿವಮೊಗ್ಗದಲ್ಲಿ ಹೈಡ್ರಾಮಾ!Rowdy-sheeter stabs himself in the stomach upon seeing police; high drama in Shivamogga!    
Rowdy, sheeter


ಶಿವಮೊಗ್ಗ: ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರೌಡಿಶೀಟರ್‌ನನ್ನು ಬಂಧಿಸಲು ಬೆಂಗಳೂರು ಬ್ಯಾಡರಹಳ್ಳಿ ಠಾಣೆ ಪೊಲೀಸರು ಶಿವಮೊಗ್ಗಕ್ಕೆ ಆಗಮಿಸಿದ್ದ ವೇಳೆ ಹೈಡ್ರಾಮಾ ನಡೆದಿದೆ. ಪೊಲೀಸರನ್ನು ಕಂಡ ರೌಡಿಶೀಟರ್ ತನ್ನ ಬಳಿಯಿದ್ದ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಗಾಯಗೊಂಡ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮೀರ್ ಅಲಿಯಾಸ್ ಬಚ್ಚನ್ ಚಾಕುವಿನಿಂದ ಇರಿದುಕೊಂಡ ರೌಡಿಶೀಟರ್. ಈತನ ವಿರುದ್ಧದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲು ಬ್ಯಾಡರಹಳ್ಳಿ ಠಾಣೆಯ ಪೊಲೀಸರ ತಂಡ ಶಿವಮೊಗ್ಗಕ್ಕೆ ಬಂದಿತ್ತು.

ಈ ವೇಳೆ ಪೊಲೀಸರನ್ನು ಕಂಡ ಬಚ್ಚನ್, ಬಂಧನದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ಬಳಿಯಿದ್ದ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡಿದ್ದಾನೆ. ಅಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ತಕ್ಷಣ ಗಾಯಗೊಂಡ ಬಚ್ಚನ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಲ್ಲಿದ್ದ ಚಾಕುವನ್ನು ಹೊರತೆಗೆಯಲಾಗಿದೆ. ಬಳಿಕ ಬಚ್ಚನ್‌ನನ್ನು ವಶಕ್ಕೆ ಪಡೆದ ಬ್ಯಾಡರಹಳ್ಳಿ ಠಾಣೆ ಪೊಲೀಸರು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

Rowdy-sheeter stabs himself in the stomach upon seeing police; high drama in Shivamogga!

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು