ಶಿವಮೊಗ್ಗ ನಗರದಲ್ಲಿ ಆಟೋರಿಕ್ಷಾಗಳಿಗೆ 10 ದಿನಗಳ ಗಡುವು ನೀಡಿದ ಆರ್‌ಟಿಒ-Meters mandatory for autorickshaws in Shivamogga city: RTO gives 10-day deadline

 SUDDILIVE || SHIVAMOGGA

ಶಿವಮೊಗ್ಗ ನಗರದಲ್ಲಿ ಆಟೋರಿಕ್ಷಾಗಳಿಗೆ 10 ದಿನಗಳ ಗಡುವು ನೀಡಿದ ಆರ್‌ಟಿಒ-Meters mandatory for autorickshaws in Shivamogga city: RTO gives 10-day deadline   
Auto, fare




ಶಿವಮೊಗ್ಗ: ನಗರದಾದ್ಯಂತ ಸಂಚರಿಸುವ ಆಟೋರಿಕ್ಷಾಗಳಲ್ಲಿ ಮೀಟರ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಮುಂದಿನ 10 ದಿನಗಳೊಳಗೆ ಮೀಟರ್ ಅಳವಡಿಸಿಕೊಳ್ಳುವಂತೆ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಒ) ಸೂಚನೆ ನೀಡಿದೆ.

ನಗರದಲ್ಲಿ ಮೀಟರ್ ಅಳವಡಿಸದೇ ಆಟೋರಿಕ್ಷಾಗಳನ್ನು ಸಂಚರಿಸುತ್ತಿರುವುದು ಹಾಗೂ ಪ್ರಯಾಣಿಕರಿಂದ ಅವೈಜ್ಞಾನಿಕವಾಗಿ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.

ಶಿವಮೊಗ್ಗ ನಗರದ ಎಲ್ಲಾ ಆಟೋರಿಕ್ಷಾ ಚಾಲಕರು ಹಾಗೂ ಮಾಲೀಕರು ಮುಂದಿನ 10 ದಿನಗಳೊಳಗಾಗಿ ಕಡ್ಡಾಯವಾಗಿ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸಿಕೊಳ್ಳಬೇಕು. ಅಲ್ಲದೆ, ಪ್ರಯಾಣಿಕರಿಂದ ಪ್ರಾಧಿಕಾರ ನಿಗದಿಪಡಿಸಿರುವ ದರವನ್ನಷ್ಟೇ ಪಡೆಯಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೀಟರ್ ಹಾಕದಿದ್ದರೆ ದೂರು ನೀಡಿ

ಆಟೋರಿಕ್ಷಾ ಚಾಲಕರು ಮೀಟರ್ ಪ್ರಕಾರ ಬಾಡಿಗೆ ಪಡೆಯದಿದ್ದಲ್ಲಿ ಅಥವಾ ಮೀಟರ್ ಹಾಕಲು ನಿರಾಕರಿಸಿದಲ್ಲಿ ಸಾರ್ವಜನಿಕರು ತಕ್ಷಣವೇ ದೂರು ಸಲ್ಲಿಸಬಹುದು.

ದೂರು ಸಲ್ಲಿಸಲು ಸಹಾಯವಾಣಿ: 8277983404

ನಗರದಲ್ಲಿ ಆಟೋರಿಕ್ಷಾ ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ವಸೂಲಿ ಮಾಡುವುದನ್ನು ತಡೆಯಲು ಹಾಗೂ ಮೀಟರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

Meters mandatory for autorickshaws in Shivamogga city: RTO gives 10-day deadline  


Post a Comment

ನವೀನ ಹಳೆಯದು