SUDDILIVE || SHIVAMOGGA
ಶಿವಮೊಗ್ಗ ಜಿಲ್ಲೆಯ 7 ತಾಲೂಕುಗಳಲ್ಲಿ ಬಿಐಇಆರ್‌ಟಿ ವಿಶೇಷ ಶಿಕ್ಷಕರ ನೇಮಕಾತಿ; ನ.19 ಅರ್ಜಿ ಸಲ್ಲಿಸಲು ಕೊನೆಯ ದಿನ-Recruitment of BIERT special teachers in 7 taluks of Shivamogga district; Last date to apply is November 19
ಶಿವಮೊಗ್ಗ: ಜಿಲ್ಲೆಯ ಏಳು ತಾಲೂಕುಗಳಲ್ಲಿ ಖಾಲಿ ಇರುವ ಬಿಐಇಆರ್‌ಟಿ (BIERT) ವಿಶೇಷ ಶಿಕ್ಷಕರ ಹುದ್ದೆಗಳನ್ನು ನೇರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಶಾಲಾ ಶಿಕ್ಷಣ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
2026-27ನೇ ಸಾಲಿನ ಸಮನ್ವಯ ಶಿಕ್ಷಣ ಮಧ್ಯವರ್ತನೆಯಡಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತಗಳಿಗೆ ಅಗತ್ಯವಿರುವ ವಿಶೇಷ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
1ರಿಂದ 5ನೇ ತರಗತಿ ಬೋಧನೆಗೆ ಶೈಕ್ಷಣಿಕ ಅರ್ಹತೆ
ಪ್ರಾಥಮಿಕ ಹಾಗೂ ತಯಾರಿ ಹಂತದ (1ರಿಂದ 5ನೇ ತರಗತಿ) ವಿಶೇಷ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆರ್‌ಸಿಐ (RCI) ಮಾನ್ಯತೆ ಪಡೆದ ಸಂಸ್ಥೆಯಿಂದ ವಿಶೇಷ ಶಿಕ್ಷಣದಲ್ಲಿ ಡಿ.ಇಡಿ. ಪದವಿ ಪಡೆದಿರಬೇಕು. ಅಲ್ಲದೆ, ಆರ್‌ಸಿಐನಿಂದ ಮಾನ್ಯತೆ ಪಡೆದ ಸಿಆರ್‌ಆರ್ (CRR) ಸಂಖ್ಯೆಯನ್ನು ಹೊಂದಿರಬೇಕು.
ಇದಕ್ಕೆ ಪರ್ಯಾಯವಾಗಿ, ವಿಶೇಷ ಶಿಕ್ಷಣದಲ್ಲಿ ಡಿ.ಇಡಿ.ಗೆ ಸಮಾನವಾದ ಡಿ.ಎಲ್.ಇಡಿ. ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿದ್ದು, ಆರ್‌ಸಿಐ ಮಾನ್ಯತೆಯ ಸಿಆರ್‌ಆರ್ ಸಂಖ್ಯೆ ಹೊಂದಿರಬೇಕು. ಅಥವಾ ಸಮನ್ವಯ ಶಿಕ್ಷಣದಲ್ಲಿ ವಿವಿಧ ವಿಕಲತಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆರು ತಿಂಗಳ ಬೋಧನಾ ತರಬೇತಿ ಪಡೆದಿರಬೇಕು.
6ರಿಂದ 12ನೇ ತರಗತಿ ಬೋಧನೆಗೆ ಅರ್ಹತೆ
ಮಾಧ್ಯಮ ಹಂತ (6ರಿಂದ 8ನೇ ತರಗತಿ) ಹಾಗೂ ಪ್ರೌಢಶಾಲಾ ಹಂತ (9ರಿಂದ 12ನೇ ತರಗತಿ)ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆರ್‌ಸಿಐ ಮಾನ್ಯತೆ ಪಡೆದ ಸಂಸ್ಥೆಯಿಂದ ವಿಶೇಷ ಶಿಕ್ಷಣದಲ್ಲಿ ಬಿ.ಇಡಿ. ಪದವಿ ಪಡೆದಿರಬೇಕು. ಜೊತೆಗೆ ಆರ್‌ಸಿಐ ಮಾನ್ಯತೆಯ ಸಿಆರ್‌ಆರ್ ಸಂಖ್ಯೆಯನ್ನು ಹೊಂದಿರಬೇಕು.
ಅಥವಾ ವಿಶೇಷ ಶಿಕ್ಷಣದಲ್ಲಿ ಬಿ.ಇಡಿ. ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿದ್ದು, ಆರ್‌ಸಿಐ ಮಾನ್ಯತೆಯ ಸಿಆರ್‌ಆರ್ ಸಂಖ್ಯೆ ಹೊಂದಿರಬೇಕು. ಇಲ್ಲವೇ ಸಮನ್ವಯ ಶಿಕ್ಷಣದಲ್ಲಿ ವಿವಿಧ ವಿಕಲತಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆರು ತಿಂಗಳ ಬೋಧನಾ ತರಬೇತಿ ಪಡೆದಿರಬೇಕು.
ನ.19 ಅರ್ಜಿ ಸಲ್ಲಿಸಲು ಕೊನೆಯ ದಿನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳು ಹಾಗೂ ಅಗತ್ಯ ಪೂರಕ ದಾಖಲೆಗಳೊಂದಿಗೆ ಅರ್ಜಿಯನ್ನು ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಇಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ನವೆಂಬರ್ 19 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲೆಯ ಏಳು ತಾಲೂಕುಗಳಲ್ಲಿ ಖಾಲಿ ಇರುವ ವಿಶೇಷ ಶಿಕ್ಷಕರ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ.



0 ಕಾಮೆಂಟ್‌ಗಳು