Advertisement

ಶಿವಮೊಗ್ಗದ ಎಲ್ಲಮ್ಮನ ದೇವಸ್ಥಾನದ ಗೋಡೆಯ ಮೇಲೆ ಮಧ್ಯದ ಬೆರಳಿನ ಚಿಹ್ನೆ! ದೇವಸ್ಥಾನ ಸಮಿತಿ ಆಕ್ಷೇಪ-Middle finger sign on the wall of Ellamma temple in Shimoga! The temple committee objected

 SUDDILIVE || SHIVAMOGGA 

ಶಿವಮೊಗ್ಗದ ಎಲ್ಲಮ್ಮನ ದೇವಸ್ಥಾನದ ಗೋಡೆಯ ಮೇಲೆ ಮಧ್ಯದ ಬೆರಳಿನ ಚಿಹ್ನೆ! ದೇವಸ್ಥಾನ ಸಮಿತಿ ಆಕ್ಷೇಪ-Middle finger sign on the wall of Ellamma temple in Shimoga! The temple committee objected   
Ellamma, temple


ಶಿವಮೊಗ್ಗ: ನಗರದ ಅಶೋಕ ರಸ್ತೆಯಲ್ಲಿರುವ ಬೇಡರ ಬೀದಿಯಲ್ಲಿರುವ ಎಲ್ಲಮ್ಮನ ದೇವಸ್ಥಾನದ ಗೋಡೆಯ ಮೇಲೆ ಮಧ್ಯದ ಬೆರಳು ತೋರಿಸುವ ಅಸಭ್ಯ ಚಿಹ್ನೆಯನ್ನು ಹಾಕಿರುವ ಘಟನೆ ನಡೆದಿದೆ. ಇದು ದೇವಸ್ಥಾನದ ಸಮಿತಿಯ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ದೇವಸ್ಥಾನದ ಗೋಡೆಯ ಮೇಲೆ ಉದ್ದೇಶಪೂರ್ವಕವಾಗಿ ಮಧ್ಯದ ಬೆರಳಿನ ಚಿಹ್ನೆಯನ್ನು ಬಿಡಿಸಿರುವುದು ಕಂಡುಬಂದಿದ್ದು, ಈ ಕೃತ್ಯವನ್ನು ಕಿಡಿಗೇಡಿಗಳು ಎಸಗಿರುವ ಶಂಕೆ ವ್ಯಕ್ತವಾಗಿದೆ. ಧಾರ್ಮಿಕ ಶ್ರದ್ಧೆ ಹಾಗೂ ಭಕ್ತರ ಭಾವನೆಗಳಿಗೆ ಸಂಬಂಧಿಸಿದ ದೇವಸ್ಥಾನದ ಗೋಡೆಯನ್ನೇ ಇಂತಹ ಅಸಭ್ಯ ಚಿಹ್ನೆ ಬಿಡಿಸಲು ಬಳಸಿರುವುದಕ್ಕೆ ದೇವಸ್ಥಾನದ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕೃತ್ಯವನ್ನು ಕೇವಲ ಕಿಡಿಗೇಡಿಗಳ ಅಸಭ್ಯ ವರ್ತನೆ ಎಂದು ಪರಿಗಣಿಸದೆ, ದೇವಸ್ಥಾನವನ್ನೇ ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಮಾಡಿರುವ ಸಾಧ್ಯತೆಯಿದೆ ಎಂಬುದು ಸಮಿತಿಯ ಆಕ್ಷೇಪವಾಗಿದೆ. ದೇವಸ್ಥಾನದ ಗೋಡೆಯ ಮೇಲೆ ಇಂತಹ ಚಿಹ್ನೆ ಮೂಡಿಸಿರುವುದರ ಹಿಂದೆ ಯಾರ ಉದ್ದೇಶವಿದೆ ಎಂಬುದನ್ನು ಪತ್ತೆಹಚ್ಚಬೇಕೆಂದು ಸಮಿತಿ ಒತ್ತಾಯಿಸಿದೆ.


ಸಾರ್ವಜನಿಕ ಸ್ಥಳದಲ್ಲಿರುವ ಧಾರ್ಮಿಕ ಕೇಂದ್ರದ ಗೋಡೆಯ ಮೇಲೆ ಇಂತಹ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿಯೂ ಅಸಮಾಧಾನ ಮೂಡಿಸಿದೆ. ದೇವಸ್ಥಾನದ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿರುವ ಕಿಡಿಗೇಡಿಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ದೇವಸ್ಥಾನವನ್ನು ಟಾರ್ಗೆಟ್ ಮಾಡಿ ಈ ಕೃತ್ಯ ಎಸಗಲಾಗಿದೆಯೇ ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಘಟನೆಯ ಹಿಂದಿರುವವರನ್ನು ಪತ್ತೆಹಚ್ಚಬೇಕಿದೆ. F*uck you ಎಂದು ಬರೆದಿರುವುದಾಗಿ ಸ್ಥಳೀಯರು ಹೇಳುತ್ತಿದ್ದು ಅದರ ಫೊಟೊ ಲಭ್ಯವಾಗಿಲ್ಲ

Middle finger sign on the wall of Ellamma temple in Shimoga! The temple committee objected

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು