SUDDILIVE || SHIVAMOGGA
ಶಿವಮೊಗ್ಗದಲ್ಲಿ ನ.22ರಂದು ವಿದ್ಯುತ್ ವ್ಯತ್ಯಯ: ನಗರದ ಹಲವು ಬಡಾವಣೆಗಳಲ್ಲಿ ಬೆಳಗ್ಗೆಯಿಂದಲೇ ಕರೆಂಟ್ ಇರಲ್ಲ! Power outage in Shivamogga on November 22nd: Many areas of the city have been without power since morning!
ಶಿವಮೊಗ್ಗ: ನಗರದ ವಿವಿಧ ಭಾಗಗಳಲ್ಲಿ ಮೆಸ್ಕಾಂ ವತಿಯಿಂದ ತುರ್ತು ವಿದ್ಯುತ್ ಕಾಮಗಾರಿ ಹಾಗೂ 11 ಕೆ.ವಿ. ವಿದ್ಯುತ್ ಮಾರ್ಗದ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನವೆಂಬರ್ 22ರಂದು (ಭಾನುವಾರ) ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ನಗರದ ಮಂಡ್ಲಿ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸುಮಾರು 8 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಇಲಿಯಾಜ್ ನಗರ 9ರಿಂದ 14ನೇ ಕ್ರಾಸ್, ಮಂಡಕ್ಕಿಭಟ್ಟಿ, ಇಲಿಯಾಜ್ ನಗರ ಚಾನಲ್ ಏರಿಯಾ, ಶಾರದಾನಗರ, ಮಲ್ನಾಡ್ ಕೋಕೋ, ಕಲ್ಲೂರು ಮಂಡ್ಲಿ, ಇಂಡಸ್ಟ್ರಿಯಲ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಇನ್ನು ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ 11 ಕೆ.ವಿ. ಮಾರ್ಗದ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಇತರೆ ಪ್ರದೇಶಗಳು:
ಕುವೆಂಪುನಗರ, ಮ್ಯಾಕ್ಸ್ ಲೇಔಟ್, ಎನ್.ಇ.ಎಸ್. ಬಡಾವಣೆ, ಚೈತನ್ಯ ಟೆಕ್ನೋ ಶಾಲೆ, ಸವಳಂಗ ರಸ್ತೆ, ಡಿ.ವಿ.ಎಸ್. ಕಾಲೋನಿ, ನವುಲೆ ಇಂದಿರಾಗಾಂಧಿ ಬಡಾವಣೆ, ನವುಲೆ, ಶಿವಬಸವನಗರ, ಶ್ರೀಸಾಯಿ ಬಡಾವಣೆ, ಮಲ್ನಾಡ್ ಕೌಂಟಿ, ಬೊಮ್ಮನಕಟ್ಟೆ ಜಿ ಮತ್ತು ಹೆಚ್ ಬ್ಲಾಕ್, ನವುಲೆ ಹೊಸೂರು, ಕೃಷಿ ಕಾಲೇಜು, ಪರ್ಫೆಕ್ಟ್ ಅಲ್ಯಾ ಪೋಕಸ್ ಡೈಕಾಸ್ಟ್, ನ್ಯೂ ಡೈಕಾಸ್ಟ್ ಹಾಗೂ ಬಾಪೂಜಿ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.
ಕಾಮಗಾರಿಗಳ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಮೆಸ್ಕಾಂಗೆ ಸಹಕರಿಸುವಂತೆ ಪ್ರಕಟಣೆ ಕೋರಿದೆ.



0 ಕಾಮೆಂಟ್ಗಳು