Advertisement

ಶಿವಮೊಗ್ಗದಲ್ಲಿ ವಿಶೇಷ ಚೇತನರಿಗೆ ಸಕ್ಷಮದಿಂದ ವೀಲ್‌ಚೇರ್ ವಿತರಣೆ-Wheelchairs distributed by Saksama to the specially-abled in Shivamogga

SUDDILIVE || SHIVAMOGGA

ಶಿವಮೊಗ್ಗದಲ್ಲಿ ವಿಶೇಷ ಚೇತನರಿಗೆ ಸಕ್ಷಮದಿಂದ ವೀಲ್‌ಚೇರ್ ವಿತರಣೆ-Wheelchairs distributed by Saksama to the specially-abled in Shivamogga   

Saksham, wheelchair

ಶಿವಮೊಗ್ಗ: ವಿಶೇಷ ಚೇತನರ ದೈನಂದಿನ ಬದುಕಿಗೆ ನೆರವಾಗುವ ಹಾಗೂ ಅವರು ಸ್ವಾವಲಂಬಿ ಜೀವನ ನಡೆಸಲು ಉತ್ತೇಜನ ನೀಡುವ ಉದ್ದೇಶದಿಂದ ಸಕ್ಷಮ ಸಂಸ್ಥೆಯ ವತಿಯಿಂದ ವಿಶೇಷ ಚೇತನ ಫಲಾನುಭವಿಗಳಿಗೆ ವೀಲ್‌ಚೇರ್‌ಗಳನ್ನು ವಿತರಿಸಲಾಯಿತು.

ಶಿವಮೊಗ್ಗ ರೌಂಡ್ ಟೇಬಲ್–166ರ ಸಹಯೋಗದಲ್ಲಿ ಇತ್ತೀಚೆಗೆ ನಗರದ ಸಕ್ಷಮ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವೀಲ್‌ಚೇರ್‌ಗಳನ್ನು ವಿತರಿಸುವ ಮೂಲಕ ನೆರವು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕ್ಷಮ ಸಂಸ್ಥೆಯ ಖಜಾಂಚಿ ಆರ್. ಅಚ್ಚುತರಾವ್ ವಹಿಸಿದ್ದರು.

ಈ ಸಂದರ್ಭದಲ್ಲಿ ಶಿವಮೊಗ್ಗ ರೌಂಡ್ ಟೇಬಲ್–166ರ ಅಧ್ಯಕ್ಷ ಈಶ್ವರ್ ಸರ್ಜಿ, ಸದಸ್ಯರಾದ ಡಾ. ಸ್ವರೂಪ್ ಮಲ್ಲೇಶ್, ಸಾಗರ್, ಹೃತಿಕ್ ಹಾಗೂ ಸಕ್ಷಮದ ವಿಭಾಗ ಪ್ರಮುಖ ಕುಮಾರ್ ಶಾಸ್ತ್ರಿ ಉಪಸ್ಥಿತರಿದ್ದರು.

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು