SUDDILIVE || SHIVAMOGGA
ಶಿವಮೊಗ್ಗದಲ್ಲೂ ಬೆಳಗಿದ ತಿರುಪರಂಕುಂದ್ರಂ ದೀಪ- Tiruparankundram Lamp Lit in Shivamogga Too
ಶಿವಮೊಗ್ಗ: ತಮಿಳುನಾಡಿನ ತಿರುಪರಂಕುಂದ್ರಂನಲ್ಲಿ ದೀಪ ಪ್ರಜ್ವಲಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್ ಇಂದು ಕೂಡ ದೀಪ ಬೆಳಗಿಸಲು ಅವಕಾಶ ನೀಡಿದ ಬೆನ್ನಲ್ಲೇ, ಶಿವಮೊಗ್ಗದಲ್ಲೂ ತಿರುಪ್ಪರಂಕುಂದ್ರಂ ದೀಪಜ್ಯೋತಿಯನ್ನು ಸಾಂಕೇತಿಕವಾಗಿ ಬೆಳಗಿಸುವ ಮೂಲಕ ರಾಷ್ಟ್ರಭಕ್ತರ ಬಳಗ ಸಂಭ್ರಮಾಚರಣೆ ನಡೆಸಿದೆ.
ನಗರದ ಶಿವಮೂರ್ತಿ ವೃತ್ತದಲ್ಲಿ ಇಂದು ಸಂಜೆ ತಿರುಪ್ಪರಂಕುಂದ್ರಂನಲ್ಲಿ ದೀಪ ಪ್ರಜ್ವಲಿಸುವ ಶುಭ ಸಮಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕೆ.ಇ. ಕಾಂತೇಶ್ ಸೇರಿದಂತೆ ರಾಷ್ಟ್ರಭಕ್ತರ ಬಳಗದ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿವಮೂರ್ತಿ ವೃತ್ತದಲ್ಲಿ ಕಬ್ಬಿಣದ ಸ್ಟ್ಯಾಂಡ್ ನಿಲ್ಲಿಸಿ, ಅದಕ್ಕೆ ಕೇಸರಿ ಬಟ್ಟೆ ಸುತ್ತಿ, ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು. ಸ್ಟ್ಯಾಂಡ್ ಮೇಲೆ ಬೃಹದಾಕಾರದ ಬತ್ತಿಯನ್ನು ಸಿದ್ಧಪಡಿಸಿ, ದೀಪಜ್ಯೋತಿ ಬೆಳಗಿಸಲಾಯಿತು. ತಿರುಪ್ಪರಂಕುಂದ್ರಂನಲ್ಲಿ ದೀಪ ಬೆಳಗಿಸುವ ವಿಚಾರಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಈ ಸಾಂಕೇತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಹಾಲಿಂಗಶಾಸ್ತ್ರೀ, ಮಹಾನಗರ ಪಾಲಿಕೆ ಸದಸ್ಯರಾದ ಈ. ವಿಶ್ವಾಸ್, ಬಾಲು, ಅನಿತಾ, ಶಿರಿಷಾ, ಸೀತಾಲಕ್ಷ್ಮೀ, ಆರತಿ ಅಮ್ಮಾ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ತಮಿಳು ಸಮಾಜದ ಮುಖಂಡರಾದ ಬಗೇಟ್ ಮಂಜು, ಸುಬ್ಬು, ಶಂಕರ್, ಕುಮಾರ್, ಮಣಿ, ಸೇಲ್ವ, ಉದಯ್ ಹಾಗೂ ರಾಷ್ಟ್ರಭಕ್ತರ ಬಳಗದ ಪ್ರಮುಖರು ಮತ್ತು ರಾಷ್ಟ್ರಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಿರುಪ್ಪರಂಕುಂದ್ರಂ ದೀಪಜ್ಯೋತಿ ವಿಚಾರವಾಗಿ ಸುಪ್ರೀಂ ಕೋರ್ಟ್ನ ಇಂದಿನ ಆದೇಶದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೂ ದೀಪ ಬೆಳಗಿಸಿರುವುದು ಗಮನ ಸೆಳೆದಿದೆ. ಈ ಮೂಲಕ ತಿರುಪ್ಪರಂಕುಂದ್ರಂನಲ್ಲಿ ನಡೆಯುವ ದೀಪ ಪ್ರಜ್ವಲನೆಯ ಸಂಭ್ರಮವನ್ನು ಶಿವಮೊಗ್ಗದಲ್ಲೂ ಸಾಂಕೇತಿಕವಾಗಿ ಆಚರಿಸಲಾಗಿದೆ.
ಪ್ರತಿವರ್ಷವೂ ನಡೆಯಲಿದೆಯೇ?
ತಿರುಪ್ಪರಂಕುಂದ್ರಂ ದೀಪಜ್ಯೋತಿಯನ್ನು ಶಿವಮೊಗ್ಗದಲ್ಲೂ ಸಾಂಕೇತಿಕವಾಗಿ ಬೆಳಗಿಸುವ ಕಾರ್ಯಕ್ರಮಕ್ಕೆ ಈ ಬಾರಿ ಚಾಲನೆ ದೊರೆತಿದೆ. ಮುಂದಿನ ವರ್ಷಗಳಿಂದಲೂ ಇದೇ ರೀತಿಯ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
Tiruparankundram Lamp Lit in Shivamogga Too




0 ಕಾಮೆಂಟ್ಗಳು