ದೀಪಾವಳಿ, ಗಣಪತಿ ವಿಸರ್ಜನೆ ಹಿನ್ನೆಲೆ ವಿದ್ಯಾನಗರದಲ್ಲಿ ಫುಲ್ ಟ್ರಾಫಿಕ್ ಜಾಮ್- Full traffic jam in Vidyanagar due to Diwali and Ganpati immersion

 SUDDILIVE || SHIVAMOGGA

ದೀಪಾವಳಿ, ಗಣಪತಿ ವಿಸರ್ಜನೆ ಹಿನ್ನೆಲೆ ವಿದ್ಯಾನಗರದಲ್ಲಿ ಫುಲ್ ಟ್ರಾಫಿಕ್ ಜಾಮ್- Full traffic jam in Vidyanagar due to Diwali and Ganpati immersion   
Traffic, jam

Traffic, jam



ಶಿವಮೊಗ್ಗ: ದೀಪಾವಳಿ ಹಬ್ಬ ಹಾಗೂ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವಿದ್ಯಾನಗರದ BH ರಸ್ತೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ವಿದ್ಯಾನಗರದ ಸುಭಾಷ್ ನಗರ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಗಣಪತಿ ಮೆರವಣಿಗೆ ಸಾಗುತ್ತಿದ್ದು, ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗಣಪತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದು, ವಿದ್ಯಾನಗರದಿಂದ  MRS Circle ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ.

ವಿದ್ಯಾನಗರದಿಂದ MRS ಸರ್ಕಲ್ ತನಕ ಟ್ರಾಫಿಕ್ ಜಾಮ್

ಗಣಪತಿ ವಿಸರ್ಜನೆ ಮೆರವಣಿಗೆ ಹಾಗೂ ದೀಪಾವಳಿ ಹಬ್ಬದ ಸಂಚಾರ ದಟ್ಟಣೆ ಪರಿಣಾಮ ವಿದ್ಯಾನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಒಂದು ಕಡೆ ಗಣಪತಿ ಮೆರವಣಿಗೆ ಸಾಗುತ್ತಿದ್ದರೆ, ಮತ್ತೊಂದೆಡೆ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ರಸ್ತೆಯಲ್ಲಿ ಜಾಮ್ ಉಂಟಾಗಿದೆ.

ವಾಹನ ಸವಾರರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದು, ವಾಹನಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಕೆಲ ವಾಹನಗಳು ಮೆರವಣಿಗೆ ಸಾಗುವ ಮಾರ್ಗದ ಬದಿಯಲ್ಲಿ ಸಿಲುಕಿಕೊಂಡಿವೆ.

ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರ ಹರಸಾಹಸ

ಸ್ಥಳದಲ್ಲಿ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹಾಗೂ ಟ್ರಾಫಿಕ್ ಜಾಮ್ ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ಗಣಪತಿ ಮೆರವಣಿಗೆ ಸಾಗುವ ಹಿನ್ನೆಲೆಯಲ್ಲಿ ವಾಹನಗಳನ್ನು ನಿಯಂತ್ರಿಸಿ ಸಂಚಾರ ಸುಗಮಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಸದ್ಯ ವಿದ್ಯಾನಗರದಿಂದ MRS ಸರ್ಕಲ್ ತನಕ ವಾಹನಗಳ ದಟ್ಟಣೆ ಮುಂದುವರಿದಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್‌ನಿಂದಾಗಿ ತೊಂದರೆ ಅನುಭವಿಸುವಂತಾಗಿದೆ.

ದೀಪಾವಳಿ ಹಬ್ಬ ಹಾಗೂ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿರುವುದರಿಂದ, ವಾಹನ ಸವಾರರು ಸಂಚಾರದ ವೇಳೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.ಅಂಬ್ಯುಲೆನ್ಸ್ ವೊಂದು ವಿದ್ಯಾನಗರದ ಟ್ರಾಫಿಕ್ ನಲ್ಇ ಸಿಲುಕಿಕೊಂಡಿದೆ.

Full traffic jam in Vidyanagar due to Diwali and Ganpati immersion   

Post a Comment

ನವೀನ ಹಳೆಯದು