Advertisement

ತೀರ್ಥಹಳ್ಳಿಯಲ್ಲಿ ಸ್ಕೂಟಿ-ಬೈಕ್ ನಡುವೆ ಭೀಕರ ಅಪಘಾತ: ಹಿರಿಯ ವಾಲ್ಕನೈಸರ್ ಶಬೀರ್ ಖಾನ್ ಸ್ಥಳದಲ್ಲೇ ಸಾವು-Terrible accident between scooty and bike in Thirthahalli: Senior vulcanizer Shabir Khan dies on the spot

 SUDDILIVE || THIRTHAHALLI

ತೀರ್ಥಹಳ್ಳಿಯಲ್ಲಿ ಸ್ಕೂಟಿ-ಬೈಕ್ ನಡುವೆ ಭೀಕರ ಅಪಘಾತ: ಹಿರಿಯ ವಾಲ್ಕನೈಸರ್ ಶಬೀರ್ ಖಾನ್ ಸ್ಥಳದಲ್ಲೇ ಸಾವು-Terrible accident between scooty and bike in Thirthahalli: Senior vulcanizer Shabir Khan dies on the spot   
Thirthahalli, accident


ತೀರ್ಥಹಳ್ಳಿ: ಪಟ್ಟಣದ ಬಾಳೇಬೈಲು ಸಮೀಪ ಶನಿವಾರ ಸ್ಕೂಟಿ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ಹಿರಿಯ ವಾಲ್ಕನೈಸರ್ ಶಬೀರ್ ಖಾನ್ (57) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಬೀರ್ ಖಾನ್ ಅವರು ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ವಾಲ್ಕನೈಸರ್ ಸೆಂಟರ್ ನಡೆಸುತ್ತಿದ್ದರು. ಹಲವು ವರ್ಷಗಳಿಂದ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಸ್ಥಳೀಯವಾಗಿ ಪರಿಚಿತರಾಗಿದ್ದರು.

ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಸಹೋದರರಾದ ಕರೀಮ್ ಖಾನ್ ಅವರು ಸಹ್ಯಾದ್ರಿ ಶೂ ಸೆಂಟರ್ ನಡೆಸುತ್ತಿದ್ದು, ಮತ್ತೊಬ್ಬ ಸಹೋದರ ಹಫೀಸ್ ಖಾನ್ ಅವರು ಬಸ್ ನಿಲ್ದಾಣದ ಸಮೀಪ ವಾಲ್ಕನೈಸರ್ ಅಂಗಡಿ ನಡೆಸುತ್ತಿದ್ದಾರೆ.

ಅಪಘಾತದ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶಬೀರ್ ಖಾನ್ ಅವರ ನಿಧನಕ್ಕೆ ಸ್ಥಳೀಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Terrible accident between scooty and bike in Thirthahalli: Senior vulcanizer Shabir Khan dies on the spot   

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು