SUDDILIVE || SHIVAMOGGA
ಬಾಹುಸಾರ ಕ್ಷತ್ರೀಯರು ಮರಾಠರಲ್ಲ-ಶ್ರೀನಿವಾಸ ಪಿಸ್ಸೆ-Bahusara Kshatriyas are not Marathas - Srinivas Pissey
ಮಾತೃಭಾಷೆ ಯಾವುದು ಎಂದು ಕೇಳುತ್ತಿದ್ದಂತೆ ಮರಾಠರು ಎಂದು ಹೇಳುತ್ತಿದ್ದಂತೆ ಗಣತಿಗೆ ಬಂದ ಅಧಿಕಾರಿಗಳು ವಾಪಾಸ್ ಆಗುತ್ತಿದ್ದಾರೆ. ಇದು ಅನ್ಯಾಯವೆಂದರು ಭಾಹುಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಶ್ರೀನಿವಾಸ ಪಿಸ್ಸೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಾಹುಸಾರ ಕ್ಷತ್ರಿಯದ ಜನ ಸಂಖ್ಯೆ ಒಂದು ಲಕ್ಷ 94 ಸಾವಿರ ಜನಾಂಗ ತೋರಿಸಲಾಗಿದೆ ಬೆಂಗಳೂರಿನಲ್ಲೇ 2 ಲಕ್ಷದ ಮೇಲೆ ಇದ್ದೇವೆ. 13 ಜಿಲ್ಲೆಯಲ್ಲಿ 3½ ಲಕ್ಷ 8-10 ಲಕ್ಷದ ಜನಸಂಖ್ಯೆಯಿದೆ. 2014-15 ಸರ್ವೆಯನ್ನ ದತ್ತಾಂಶ ರೂಪದಲ್ಲಿ ಮಾಡಲಾಗಿದೆ ಎಂದು ತೋರಿಸಲಾಗಿದೆ. ರಂಗ, ರಂಗಾರೇಜು. ಸೇರಿ 13 ಉಪಪಂಗಡವಿದೆ ಎಂದು ಸರ್ಕಾರ ತಿಳಿಸಿದೆ. ಇದು ಅನ್ಯಾಯವೆಂದು ಆರೋಪಿಸಿದರು.
ಪ್ರತಿ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ ಆಯೋಗಕ್ಕೆ ಕುಂದು ಕೊರತೆ ನೀಡುತ್ತಿದ್ದೇವೆ. ಕೇಳದಿದ್ದರೆ ನ್ಯಾಯಾಲಯಕ್ಕೆ ಹೋಗಲೇ ಬೇಕಾಗಿದೆ. ಬಾಹುಸಾರ ಕ್ಷತ್ರಿಯ ಮಾತ್ರು ಭಾಷೆ ಮರಾಠ ಆದರೆ ಮರಾಠರಲ್ಲ. 74 ಉಪಪಂಗಡದಲ್ಲಿ ಸೇರಿಸಲಾಗಿದೆ. ಮರಾಠ ನಿಗಮದಲ್ಲಿ ನಮ್ಮನ್ನ ಸೇರಿಸಲಾಗುತ್ತಿದೆ
ಕೆಟಗರಿ 3 ಸಿ, 3 ಬಿಯಲ್ಲಿ ಮರಾಠರು ಬರ್ತಾರೆ ಬಾಹುಸಾರ ಕ್ಷತ್ರಿಯಾ ಸಮಾಜ 2 ಎ ನಲ್ಲಿ ಬರ್ತೇವೆ. ಹಿಂದುಳಿದ ವರ್ಗದ ದೇವರಾಜ್ ಅರಸ್ ಅವರ ಸಮಯದಲ್ಲಿ 2 ಎ ಕೆಟಗರಿಗೆ ಸೇರಿಸಲಾಗಿದೆ. ಶಿವಮೊಗ್ಗದಲ್ಲಿ 32 ಸಾವಿರ ಜನಸಂಖ್ಯೆಯಿದೆ ಎಂದರು.
Bahusara Kshatriyas are not Marathas