SUDDILIVE || SHIVAMOGGA
ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ? ಜಲಾಶಯಗಳು ಏನಾಗಿವೆ?Rain fall in shivamogga and Condition of reservoirs
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 17 ಜಿಲ್ಲೆಯಲ್ಲಿ ಮಳೆ ಸುರಿದಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಬೆಳಗಾವಿಯಲ್ಲಿ ಬಾರಿ ಮಳೆ ಸುರಿದಿದೆ.
ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ತಾಲೂಕಿನ ಆಗುಂಬೆ 116.2 ಮಿಮಿ, ಹೊನ್ನೆತಾಳಿನಲ್ಲಿ 105.5 ಮಿಮಿ, ಬಿದರಗೋಡಿನಲ್ಲಿ 93 ಮಿಮಿ, ಎರೆಹಳ್ಳಿಯಲ್ಲಿ 71 ಮಿಮಿ, ಆರಗದಲ್ಲಿ 68.5 ಮಿಮಿ, ಮುಳಬಾಗಿಲಿನಲ್ಲಿ 67 ಮಿಮಿ,
ನೆರಟೂರಿನಲ್ಲಿ 65.5 ಮಿಮಿ, ಹೊಸಹಳ್ಳಿಯಲ್ಲಿ 65 ಮಿಮಿ, ತೀರ್ಥಮತ್ತೂರಿನಲ್ಲಿ 55.5 ಮಿಮಿ, ಮೇಗರವಳ್ಳಿಯಲ್ಲಿ 59 ಮಿಮಿ, ಬೆಜ್ಜವಳ್ಳಿಯಲ್ಲಿ 45.5 ಮಿಮಿ,ಬಂದ್ಯ ಕುಕ್ಕೆ 44.5 ಮಿಮಿ, ಸಾಗರದ ಖಂಡಿಕಾದಲ್ಲಿ 63.5 ಮಿಮಿ, ಕೆಳದಿಯಲ್ಲಿ 49 ಮಿಮಿ, ಮಾಳ್ವೆಯಲ್ಲಿ 47 ಮಿಮಿ, ಕಲ್ಮನೆ 45 ಮಿಮಿ, ಭೀಮನೇರಿಯಲ್ಲಿ 40 ಮಿಮಿ ಮಳೆಯಾಗಿದೆ. ಹೊಸನಗರದಲಿ 50.4 ಮಿಮಿ, ಸೋನಾಲೆಯಲ್ಲಿ 48 ಮಿಮಿ, ಮೇಲಿನ ಬೆಸಿಗದ 59.5 ಮಿಮಿ, ಸೊರಬದ ಗುಡವಿಯಲ್ಲಿ 46.5 ಮಿಮಿ, ನ್ಯಾಸಿರಿಯಲ್ಲಿ 57 ಮಿಮಿ ಮಳೆಯಾಗಿದೆ.
ತುಂಗ ಜಲಾಶಯ
ಅದರಂತೆ ತುಂಗ ಜಲಾಶಯದ ಒಳಹರಿವು ಹೆಚ್ಚಾಗಿದೆ. 12 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 8 ಗೇಟು ಮತ್ತು ಪವರ್ ಹೌಸ್ ನಿಂದ 12 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ನಿನ್ನೆ 4 ಗೇಟು ಮೇಲೆಕ್ಕೆ ಎತ್ತಿ 7500 ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು. ಇಂದು ನಾಲ್ಕುವರೆ ಸಾವಿರ ಕ್ಯೂಸೆಕ್ ನೀರು ಹೆಚ್ಚು ಹರಿದು ಬರುತ್ತಿದೆ.
ಭದ್ರ ಜಲಾಶಯ
ಅದರಂತೆ ಭದ್ರ ಜಲಾಶಯಕ್ಕೆ ನೀರು ಹೆಚ್ಚಿನ ನೀರು ಹರಿದು ಬರುತ್ತಿದೆ. ನಿನ್ನೆ 150 ಕ್ಯೂಸೆಕ್ ನೀರು ಹರಿದು ಬರುತ್ತಿದ್ದ ಒಳಹರಿವು ಇಂದು ಬೆಳಿಗ್ಗೆ 3500 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ 136 ಅಡಿ ನೀರು ಇದ್ದ ಭದ್ರ ಜಲಾಶಯದಲ್ಲಿ ಇಂದು 137.6 ಅಡಿ ನೀರು ಸಂಗ್ರಹವಾಗಿದೆ.
ಲಿಂಗನಮಕ್ಕಿ
ಲಿಂಗನಮಕ್ಕಿ ಜಲಾಶಯದಲ್ಲೂ ಇಂದು ನೀರಿನ ಒಳಹರಿವು ಹೆಚ್ಚಾಗಿದೆ. ನಿನ್ನೆ 10,900 ಕ್ಯೂಸೆಕ್ ನೀರು ಹರಿದು ಬರುತ್ತಿದ್ದ ಜಲಾಶಯಕ್ಕೆ ಇಂದು 17530 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 151.64 ಟಿಎಂಸಿ ನೀರು ಸಂಗ್ರಹದ ಜಲಾಶಯ 1819 ಅಡಿ ನೀರಿನ ಸಂಗ್ರಹದ ಸಾಮರ್ಥ್ಯ ಹೊಂದಿದೆ. ಶೇ.21.82 ರಷ್ಡು ನೀರು ಸಂಗ್ರಹವಾಗಿದೆ 1764.84 ಅಡಿ ನೀರು ಸಂಗ್ರಹವಾಗಿದೆ.
Rain fall in shivamogga and Condition of reservoirs