ಶಿವಮೊಗ್ಗದಲ್ಲಿ ಕೋವಿಡ್ ಗೆ ಮೆಗ್ಗಾನ್ ನಲ್ಲಿ ಹಲವು ಸಿದ್ಧತೆಗಳು-Many preparations in Meggan for Covid

SUDDILIVE || SHIVAMOGGA

ಶಿವಮೊಗ್ಗದಲ್ಲಿ ಕೋವಿಡ್ ಗೆ ಮೆಗ್ಗಾನ್ ನಲ್ಲಿ ಹಲವು ಸಿದ್ಧತೆಗಳು-Many preparations in Meggan for Covid in Shivamogga

Covid,Meggan

ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಶಿವಮೊಗ್ಗದಲ್ಲೂ ಹೆಚ್ಚಿನ ಜಾಗೃತಿ ವಹಿಸಲಾಗಿದೆ. ಶಿವಮೊಗ್ಗದ ಮೆಗ್ಗಾನ್ ನಲ್ಲಿ ಈ ಕುರಿತು ಟಾಸ್ಕ್ ಫೋರ್ಸ್, ಔಷಧಗಳ ಸಂಗ್ರಹ, ಕೋವಿಡ್ ವಾರ್ಡ್ ಗಳನ್ನ ರಚಿಸಿಕೊಳ್ಳಲಾಗಿದ್ದು ಇಂದಿನಿಂದ ರ‌್ಯಾಂಡಂ ತಪಾಸಣೆಗೆ ಸಿದ್ದತೆ ನಡೆದಿದೆ. 

ಮೆಡಿಕಲ್ ಸೆಕ್ರೆಟರಿಯೊಂದಿಗೆ ಸಿಮ್ಸ್ ನ ಹೆಡ್ ಆಫ್ ದ ಡಿಪಾರ್ಟ್ ಮೆಂಟ್ ವೈದ್ಯರ ಆನ್ ಲೈನ್ ಸಭೆ ನಡೆದಿದೆ. ಸಭೆಯಲ್ಲಿ 12 ಜನಕ್ಕೂ ಹೆಚ್ಚು ಅಧಿಕಾರಿಗಳ ತಂಡ ರಚಿಸಿ ಕೋವಿಡ್ ಟಾಸ್ಕ್ ಫೋರ್ಸ್ ಗಳನ್ನ ರಚಿಸಿಕೊಳ್ಳಲಾಗಿದೆ. ಅದರಂತೆ ಮೆಗ್ಗಾನ್ ನಲ್ಲಿ ಸಾರಿ ಪ್ರಕರಣಗಳು ದಾಖಲಾದರೆ ಅದನ್ನೂ ಸಹ ಪರೀಕ್ಷೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಜನರಲ್ ಮಡೆಸಿನ್ ವಾರ್ಡ್,  ಪಿಡಿಯಾಟ್ರಿಕಲ್ ವಾರ್ಡ್, ಒಬಿಜಿ, ಹೆರಿಗೆ ವಾರ್ಡ್ ಗಳಲ್ಲಿ,  ಮೆಡಿಕಲ್ ವಿಂಗ್ ಗಳಲ್ಲಿ ಕೋವಿಂಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಐಸಿಯು ಬೆಡ್ ಗಳನ್ನ ನಿರ್ಮಿಸಿಕೊಳ್ಳಲಾಗಿದೆ. ಔಷಧಗಳ ಮರು ತಪಾಸಣೆ ನಡೆದಿದೆ. ಕಳೆದ ನಾಲ್ಕು ವರ್ಷದಿಂದ ಕೋವಿಡ್ ಕಾಣಿಸಿಕೊಳ್ಳದ ಹಿನ್ನಲೆಯಲ್ಲಿ ಔಷಧಗಳ ದಾಸ್ತಾನುಗಳ ಬಗ್ಗೆ ಪರಿಶೀಲಿಸಲಾಗಿದೆ ಆಂಟಿಬಯೋಟಿಕ್ ಔಷಧಗಳನ್ನ ತರಿಸಿಕೊಳ್ಳುವ ಬಗ್ಗೆನೂ ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೆ ಸಾರ್ವಜನಿಕರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ರ‌್ಯಾಂಡಂ ತಪಾಸಣೆಗೆ ಸಿದ್ಧತೆ ನಡೆದಿದೆ.

 Many preparations in Meggan for Covid

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close