SUDDILIVE || SHIVAMOGGA
ಬೈಕ್ ಮತ್ತು ಆಟೋ ನಡುವೆ ಅಪಘಾತ, ಆಟೋ ಚಾಲಕ ಸಾವು-Accident between bike and auto, auto driver dies
ಬೆಳ್ಳಂಬೆಳಗ್ಗೆ ವಿನೋಬನಗರದ ಸೈಕಲ್ ಲೋಕದ ಎದುರು ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿದ್ದಾನೆ.
ಬಸ್ ನಿಲ್ದಾಣ ಕಡೆಯಿಂದ ಬಂದ ಬೈಕ್ ಮತ್ತು ಚೌಕಿ ಕಡೆಯಿಂದ ಬಂದ ಆಟೋ ನಡುವೆ ಡಿಕ್ಕಿ ಯಾಗಿದೆ. ಅಪಘಾತದಲ್ಲಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಆಟೋ ಚಾಲಕ ಸ್ಥಳದಲ್ಲಿ ಸತ್ತಿರುವ ಅಪರೂಪದ ಘಟನೆ ಇಂದು ಬೆಳಿಗ್ಗೆ ಸುಮಾರು 5-30 ಕ್ಕೆ ಸಂಭವಿಸಿದೆ.
ಸಾವನ್ನಪ್ಪಿರುವ ಆಟೋ ಚಾಲಕನನ್ನು ಜಫ್ರುಲ್ಲಾ ಯಾನೆ ವಾಲು ಎಂದು ಗುರುತಿಸಲಾಗಿದ್ದು ಈತ ನ್ಯೂ ಮಂಡಳಿ ನಿವಾಸಿಯಾಗಿದ್ದಾನೆ. ಆಟೋ ಮತ್ತು ಬೈಕ್ ಎರಡನ್ನು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಸ್ಥಳೀಯರ ಪ್ರಕಾರ ಬೈಕ್ ಸವಾರ ರ‌್ಯಾಪಿಡೋ ಚಾಲಕನೆಂದು ಹೇಳುತ್ತಿದ್ದಾರೆ. ಎಫ್ಐಆರ್ ಏನಾಗಲಿದೆ ಕಾದು ನೋಡಬೇಕಿದೆ.
Accident between bike and auto