SUDDILIVE || SHIVAMOGGA
ಅಲರ್ಟ್ ನಡುವೆ ನಗರದಲ್ಲಿ ಭರ್ಜರಿ ಮಳೆ-Heavy rain in the city amid alert
ಅಲರ್ಟ್ ನಡುವೆ ನಗರದಲ್ಲಿ ಭರ್ಜರಿ ಮಳೆಯಾಗಿದೆ. ಆರೆಂಜ್ ಅಲರ್ಟ್ ಶಿವಮೊಗ್ಗಕ್ಕೆ ಬಿದ್ದಿದ್ದು ಸಿಟಿಯಲ್ಲಿ ಮಧ್ಯಾಹ್ನದ ಹೊತ್ತಿಗೆ ಜೋರು ಮಳೆ ಆರಂಭವಾಗಿದೆ. ವಿವಿಧೆಡೆ ಜೋರು ಗಾಳಿ ಸಹಿತ ವರ್ಷಧಾರೆಯಾಗುತ್ತಿದೆ.
ಇವತ್ತು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ಹೊತ್ತಿಗೆ ತುಸು ಬಿಸಿಲು ಕಾಣಿಸಿತ್ತು. ಆ ಬಳಿಕ ದಟ್ಟ ಮೋಡ ಕವಿದು, ಗಾಳಿ ಸಹಿತ ಮಳೆ ಆರಂಭಾಗಿದೆ. ಶಿವಮೊಗ್ಗ ನಗರ, ಶಿವಮೊಗ್ಗ ತಾಲೂಕಿನ ಕೂಡ್ಲಿ, ಬಿದರೆ, ಹಸೂಡಿ, ಅಬ್ಬಲಗೆರೆ, ಕುಂಚೇನಹಳ್ಳಿ, ರಾಮನಗರ ಭಾಗದಲ್ಲಿ ಜೋರು ಮಳೆಯಾಗುತ್ತಿದೆ.
ಆಯನೂರು, ಸಂತೆ ಕಡೂರು ಸುತ್ತಮುತ್ತ ಪ್ರಸ್ತುತ ಸಾಧಾರಣೆ ಮಳೆಯಾಗುತ್ತಿರುವ ವರದಿಯಾಗಿದೆ. ಉಳಿದಂತೆ ಜಿಲ್ಲೆಯ ಹಲವೆಡೆ ಜೋರು ಮಳೆಯಾಗುತ್ತಿದೆ.
ನಾಳೆಯಿಂದ 15ನೇ ತಾರೀಖಿನವರೆಗೆ ಜಿಲ್ಲೆಗೆ ಅಲರ್ಟ್ ಬಿದ್ದಿದೆ ನಾಳೆ ಶಿವಮೊಗ್ಗ ನಗರದಲ್ಲಿ ರೆಡ್ ಲೈಟ್ ಘೋಷಣೆಯಾಗಿದೆ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಅದರಂತೆಯೇ ಜೂನ್ 13 ಮತ್ತು 14 ರಂದು ಆರೆಂಜ್ ಅಲರ್ಟ್ ಇದ್ದರೆ ಜೂನ್ 15 ಎಲ್ಲೋ ಅಲರ್ಟ್ ಘೋಷಣೆಯಾಗಿದೆ.
Heavy rain in the city amid alert