SUDDILIVE || SHIVAMOGGA
ಶೇ.10 ರಷ್ಟು ಬಡ್ಡಿಗೆ ಸಾಲ, ದಾಖಲಾಯಿತು ದೂರು-Loan at 10% interest, complaint filed
ಶೇಕಡ 10ರಷ್ಟು ಬಡ್ಡಿ ನೀಡಲು ಸಾಧ್ಯವಾಗದ ಮಹಿಳೆಯ ಮೇಲೆ ಅಮ್ಮ ಮತ್ತು ಮಗ ಅಲ್ಲೇ ನಡೆಸಿರುವ ಘಟನೆ ವಿನೋಬನಗರ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ
ಹೋಂ ನರ್ಸಿಂಗ್ ನಡೆಸುತ್ತಿದ್ದ ಲಕ್ಷ್ಮಿ ಎಂಬ ಮಹಿಳೆಯು ತಮಗೆ ಪರಿಚಯವಿದ್ದ ಸ್ನೇಹಿತೆ ಮೂಲಕ ಸವಿತಾ ಎಂಬವರಿಂದ 50,000 ರೂ.ಗಳನ್ನು ಶೇಕಡಾ 10ರಷ್ಟು ಬಡ್ಡಿಯಂತೆ ಪಡೆದುಕೊಂಡಿದ್ದರು. ಇದಕ್ಕೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಚಕ್ ಗಳನ್ನು ಸಹ ಲಕ್ಷ್ಮಿ ಅವರು ಸವಿತಾ ಅವರಿಗೆ ನೀಡಿದ್ದರು. ಕಳೆದ ಐದು ತಿಂಗಳಿಂದ 25000 ಹಣವನ್ನು ಲಕ್ಷ್ಮಿ ಅವರು ಸವಿತಾ ಅವರಿಗೆ ನೀಡಿದ್ದರು.
ಆದರೂ ಸಹ ಹಣ ಕೊಡಿಸಿದ ಸ್ನೇಹಿತೆಯಯ ಅಮ್ಮ ಮತ್ತು ಮಗನಿಗೆ ಕಾನ್ಫೆರೆನ್ಸ್ ಹಾಕಿ ಮಾತನಾಡಿಸಿದಾಗ ತಾಯಿ ಮತ್ತು ಮಗ ಇಬ್ಬರೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಣ ನೀಡದಿದ್ದರೆ ಏನು ಮಾಡುತ್ತೇವೆ ನೋಡು ಅಂತ ಹೇಳಿ ಬೆದರಿಕೆ ಹಾಕಿದ್ದರು. ಹಣ ನೀಡುವುದಾಗಿ ಲಕ್ಷ್ಮಿಯವರು ಹೇಳಿ ಕರೆಯನ್ನು ಕಟ್ ಮಾಡಿದ್ದರು.
ಸೋಮಿನಕೊಪ್ಪ ರಸ್ತೆಯಲ್ಲಿರುವ ರಸ್ತೆ ಹತ್ತಿರ ಅಂಗಡಿಗೆ ಹೋಗುವಾಗ ಭುವನ್ ಮತ್ತು ಅವರ ತಾಯಿ ಸವಿತಾ ರವರು ಲಕ್ಷ್ಮಿ ಅವರನ್ನ ಅಡ್ಡಗಟ್ಟಿ ಎಳೆದಾಡಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ವಿನೋದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈಗಾಗಲೇ ಚೆಕ್ ಒತ್ತೆಯಿಟ್ಟುಕೊಂಡು ಬಡ್ಡಿ ನೀಡಿದ ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಕರಣಗಳು ದೂರು ದಾಖಲಾಗಿ ಪೊಲೀಸ್ ರೈಡ್ ಗೆ ಒಳಗಾಗಿವೆ. ಈಗ ಮತ್ತೊಂದು ಪ್ರಕರಣ ದಾಖಲಾಗಿದೆ.