ಕೃಷಿ ಕೇಂದ್ರದ ಸಹ ಸಂಶೋಧನಾ ನಿರ್ದೇಶಕನ ಮನೆಯ ಮೇಲೆ ಲೋಕಾ ದಾಳಿ-Lokayuktha raid the house of the associate research director of the agricultural center

SUDDILIVE || SHIVAMOGGA

ಕೃಷಿ ಕೇಂದ್ರದ ಸಹ ಸಂಶೋಧನಾ ನಿರ್ದೇಶಕನ ಮನೆಯ ಮೇಲೆ ಲೋಕ ದಾಳಿ-Lokayuktha raid the house of the associate research director of the agricultural center

Lokayuktha, raid

ಬೆಳ್ಳಂ ಬೆಳಗ್ಗೆ ಲೋಕಾಯುಕ್ತರು ದಾಳಿ ನಡೆಸುವ ಮೂಲಕ ಶಾಕ್ ನೀಡಿದ್ದಾರೆ. ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ರೇಡ್ ನಡೆದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿರುವ ಅಧಿಕಾರಿಯ ಮನೆಯ ಮೇಲೂ ದಾಳಿ ನಡೆದಿದೆ. 

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಭಾಗವಾದ ಸಾವಯವ ಕೃಷಿ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಸ್ ಪ್ರದೀಪ್ ಮನೆ ಮೇಲೆ ದಾಳಿಯಾಗಿದೆ. 

ಶಿವಮೊಗ್ಗ ವಿನೋಬ ನಗರದಲ್ಲಿ ಇರುವ ನಿವಾಸ,  ಶಿವಮೊಗ್ಗದಲ್ಲಿರುವ ಫಾರಂ ಹೌಸ್ ಮೇಲೂ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಇದಲ್ಲದೆ ಶಿವಮೊಗ್ಗದ ಎರಡು ಕಚೇರಿಗಳ ಮೇಲೂ  ಲೋಕಾಯುಕ್ತ ತಂಡ ದಾಳಿ ನಡೆಸಿದೆ. 

ವಿನೋಬ ನಗರದ ಎಪಿಎಂಸಿ ಹಿಂಭಾಗವಿರುವ ಪ್ರದೀಪ್ ನಿವಾಸದಲ್ಲಿ ದಾಳಿ ನಡೆದಾಗ ಪ್ರದೀಪ್ ಇರುವುದಾಗಿ ತಿಳಿದುಬಂದಿದೆ. ನಿರಂತರವಾಗಿ ದೂರು ಬಂದ ಹಿನ್ನೆಲೆ ದಾಳಿ‌ 

ದಾಖಲೆಗಳನ್ನ  ಲೋಕಾ ಅಧಿಕಾರಿಗಳು ಪರಿಶೀಲಿಸುತ್ತಿರುವುದಾಗಿ ತಿಳಿದು ಬಂದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ದೂರಿನ ಹಿನ್ನೆಲೆಯಲ್ಲಿ ಪ್ರದೀಪ್ ಅವರ ಶಿವಮೊಗ್ಗದ ಪ್ರಿಯದರ್ಶಿನಿ ಲೇಔಟ್ ಒಂದನೇ ಮುಖ್ಯ ರಸ್ತೆಯಲ್ಲಿರುವ ನಿವಾಸ, ಶಿಕಾರಿಪುರ ತಾಲ್ಲೂಕಿನ ಭದ್ರಾಪುರದಲ್ಲಿ ನಾಲ್ಕು ಎಕರೆ ತೋಟದಲ್ಲಿರುವ ಮನೆ ಹಾಗೂ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಕಾಳಶೆಟ್ಟಿ ಕೊಪ್ಪದ 10.5 ಎಕರೆ ತೋಟದಲ್ಲಿರು ಮನೆ ಹಾಗೂ ಅವರ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದಾರೆ.

Lokayuktha raid the house of the associate research director of the agricultural center

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close