" alt="ad">

ಹಬ್ಬನಘಟ್ಟ-ಅರಸೀಕೆರೆ ಕಾಲುವೆ ಕ್ರಾಸಿಂಗ್ ಕಾಮಗಾರಿ-ಶಿವಮೊಗ್ಗದಿಂದ ಚಲಿಸುವ ಕೆಲ ರೈಲುಗಳ ರದ್ಧತಿ-RAIL Cancellation due to channel crossing work

SUDDILIVE || SHIVAMOGGA

ಹಬ್ಬನಘಟ್ಟ-ಅರಸೀಕೆರೆ ಕಾಲುವೆ ಕ್ರಾಸಿಂಗ್ ಕಾಮಗಾರಿ-ಶಿವಮೊಗ್ಗದಿಂದ ಚಲಿಸುವ ಕೆಲ ರೈಲುಗಳ ರದ್ಧತಿ-RAIL Cancellation due to channel crossing work

Rail, cancellation


ವಿಶ್ವೇಶ್ವರಯ್ಯ ಜಲ ನಿಗಮ ಲಿಮಿಟೆಡ್ (ವಿಜೆಎನ್ಎಲ್) ವತಿಯಿಂದ ಹಬ್ಬನಘಟ್ಟ – ಅರಸೀಕೆರೆ ಸೆಕ್ಷನ್ ನಡುವೆ ದಿನಾಂಕ 30.06.2025 (ಸೋಮವಾರ) ದಂದು ನಡೆಯಲಿರುವ ಕಾಲುವೆ ಕ್ರಾಸಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ, ಕೆಳಗಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ, ಭಾಗಶಃ ರದ್ದುಪಡಿಸಲಾಗಿದೆ, ನಿಯಂತ್ರಿಸಲಾಗಿದೆ ಮತ್ತು ಮರುನಿಗದಿ ಮಾಡಲಾಗಿದೆ:

ರದ್ದುಪಡಿಸಲಾದ ರೈಲುಗಳು:

ರೈಲು ಸಂ. 56267 ಅರಸೀಕೆರೆ  – ಮೈಸೂರು ಪ್ಯಾಸೆಂಜರ್, ದಿನಾಂಕ 30.06.2025 ರ ಪ್ರಯಾಣವನ್ನು ರದ್ದುಪಡಿಸಲಾಗಿದೆ.

ರೈಲು ಸಂ. 16206 ಮೈಸೂರು – ತಾಳಗುಪ್ಪ ಎಕ್ಸಪ್ರೆಸ್, ದಿನಾಂಕ 30.06.2025 ರ ಪ್ರಯಾಣವನ್ನು ರದ್ದುಪಡಿಸಲಾಗಿದೆ.

ರೈಲು ಸಂ. 16205 ತಾಳಗುಪ್ಪ – ಮೈಸೂರು ಎಕ್ಸಪ್ರೆಸ್, ದಿನಾಂಕ 30.06.2025ರ ಪ್ರಯಾಣವನ್ನು ರದ್ದುಪಡಿಸಲಾಗಿದೆ.

ಭಾಗಶಃ ರದ್ದುಪಡಿಸಲಾದ ರೈಲು:

ರೈಲು ಸಂ. 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸಪ್ರೆಸ್, ದಿನಾಂಕ 30.06.2025 ರ ಪ್ರಯಾಣವನ್ನು ಮೈಸೂರು – ಅರಸೀಕೆರೆ  ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗಿದ್ದು, ಈ ರೈಲು ಅರಸೀಕೆರೆ  ಯಿಂದ ತನ್ನ ನಿಗದಿತ ಸಮಯದಲ್ಲಿ ಹೊರಡಲಿದೆ.

ನಿಯಂತ್ರಿಸಲಾದ ರೈಲು:

ರೈಲು ಸಂ. 56266 ಮೈಸೂರು – ಅರಸೀಕೆರೆ  ಪ್ಯಾಸೆಂಜರ್, ದಿನಾಂಕ 30.06.2025 ರ ಪ್ರಯಾಣದಲ್ಲಿ 60 ನಿಮಿಷಗಳವರೆಗೆ ಮಾರ್ಗ ಮಧ್ಯೆ ನಿಯಂತ್ರಿಸಲಾಗುವುದು.

ಮರುನಿಗದಿ (ರಿಶೆಡ್ಯೂಲ್) ಮಾಡಲಾದ ರೈಲುಗಳು:

ರೈಲು ಸಂ. 56265 ಅರಸೀಕೆರೆ  – ಮೈಸೂರು ಪ್ಯಾಸೆಂಜರ್, ದಿನಾಂಕ 30.06.2025 ರ ಪ್ರಯಾಣವನ್ನು ಅರಸೀಕೆರೆ  ನಿಂದ 60 ನಿಮಿಷಗಳವರೆಗೆ ಮರುನಿಗದಿ ಮಾಡಲಾಗಿದೆ.

ರೈಲು ಸಂ. 06269 ಮೈಸೂರು – ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ ವಿಶೇಷ, ದಿನಾಂಕ 30.06.2025ರ ಪ್ರಯಾಣವನ್ನು  ಮೈಸೂರು ನಿಂದ 60 ನಿಮಿಷಗಳವರೆಗೆ ಮರುನಿಗದಿಪಡಿಸಿಲಾಗಿದೆ.

RAIL Cancellation due to channel crossing work

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close