ಶಿವಮೊಗ್ಗದಲ್ಲಿ ವಿಶ್ವ ಯೋಗಡೇ ಆಚರಣೆ -World Yoga Day celebrated in Shimoga

 SUDDILIVE || SHIVAMOGGA

ಶಿವಮೊಗ್ಗದಲ್ಲಿ ವಿಶ್ವ ಯೋಗಡೇ ಆಚರಣೆ -World Yoga Day celebrated in Shimoga

Yoga day, shivamogga

11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವದ್ಯಂತ ನಡೆದಿದ್ದು ಶಿವಮೊಗ್ಗದಲ್ಲೂ ಹಲವೆಡೆ ಯೋಗ ಡೇ ಅನ್ನು  ಆಚರಿಸಲಾಯಿತು.

ನೆಹರು ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದ ಆವರಣ ಆದಿಚುಂಚನಗಿರಿ, ವಿನೋಬನಗರದ ಶಿವಗಂಗಾ ಯೋಗ ಕೇಂದ್ರ ಸೇರಿದಂತೆ ಹಲವು ಶಿವಮೊಗ್ಗದಲ್ಲಿ ವಿಶ್ವ ಯೋಗ ಡೇ ಅನ್ನು ಆಚರಿಸಲಾಯಿತು. 

ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷಣೆ ಅಡಿ ಶಿವಗಂಗಾ ಯೋಗ ಕೇಂದ್ರದಲ್ಲಿ  ಕೇಂದ್ರ ಸಂವಹನ ಇಲಾಖೆ ಶಿವಮೊಗ್ಗ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಹಾಗೂ ಶಿವಗಂಗಾ ಯೋಗ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಶಿವಗಂಗಾ ಯೋಗ ಕೇಂದ್ರ ಆವರಣದಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯಲ್ಲಿ ಹಲವು ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು.

ಎಂಎಲ್ಸಿ ಡಾ. ಧನಂಜಯ ಸರ್ಜಿ ಮಾಜಿ ಎಂ ಎಲ್ ಸಿ ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಸೇರಿದಂತೆ ಹಲವಾರು ಯೋಗಪಟುಗಳು ವಿಶ್ವ ಯೋಗ ದಿನಾಚರಣೆಯನ್ನು ಯೋಗದ ವಿವಿಧ ಭಂಗಿಗಳನ್ನು ಹಾಕುವ ಮೂಲಕ ಈ ಆಚರಣೆಯಲ್ಲಿ ಪಾಲ್ಗೊಂಡರು.

World Yoga Day celebrated in Shimoga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close