SUDDILIVE || THIRTHAHALLI
ವಿದ್ಯುತ್ ಕಂಬಕ್ಕೆ ಕಾರುಡಿಕ್ಕಿ ಮೂವರಿಗೆ ಗಾಯ-Three injured after car crashes into electric pole
ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದು ಪಲ್ಟಿ ಯಾಗಿರುವ ಘಟನೆ ಮೇಗರವಳ್ಳಿಯ ಅರೇಕಲ್ ಬಳಿ ಇಂದು ಸಂಭವಿಸಿದೆ.
ತೀರ್ಥಳ್ಳಿ ತಾಲೂಕಿನ ಮೇಗರವಳ್ಳಿ ಸಮೀಪದ ಅರೇಕಲ್ ಬಳಿ ಕಾರೊಂದು ಶಿವಮೊಗ್ಗದ ಕಡೆ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ವಿದ್ಯುತ್ ಕಂಬ ಮುರಿದು ಬಿದ್ದಿದೆ.
ಕಾರಿನಲ್ಲಿ ಚಾಲಕನು ಸೇರಿ ಮೂವರು ಪ್ರಯಾಣಿಕರಿದ್ದು ಮೂವರಿಗೂ ಗಾಯಗಳಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ ಎ 14 ಎಂಬಿ 97 15 ಕ್ರಮ ಸಂಖ್ಯೆಯ ಸ್ವಿಫ್ಟ್ ಕಾರು ಅಪಘಾತಕ್ಕೆ ಒಳಗಾದ ಕಾರಾಗಿದೆ ಎಂದು ತಿಳಿದು ಬಂದಿದೆ. ಪಶ್ಚಿಮ ಘಟ್ಟದಲ್ಲಿ ಅತಿಯಾದ ಮಳೆಯಿಂದಾಗಿ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
car crashes into electric pole