ಜೋಗಕ್ಕೆ ಬಂದು ಆತ್ಮಹತ್ಯೆಗೆ ನಿರ್ಧರಿಸಿದವನ ಮನವೊಲಿಸಿದ ಪೊಲೀಸರು-police persuaded a man in joga

SUDDILIVE || SHIVAMOGGA

ಜೋಗಕ್ಕೆ ಬಂದು ಆತ್ಮಹತ್ಯೆಗೆ ನಿರ್ಧರಿಸಿದವನ ಮನವೊಲಿಸಿದ ಪೊಲೀಸರು-Police persuaded a man who had decided to commit suicide in joga

Joga, persuaded

ವ್ಯಾಪಾರದಲ್ಲಿ ನಷ್ಟಹೊಂದಿದ್ದ ವ್ಯಕ್ತಿ ಜೋಗಕ್ಕೆ ಬಂದು ಆತ್ಮಹತ್ಯೆಗೆ ನಿರ್ಧರಿಸಿದ್ದವನ ಮನವೊಲಿಸುವಲ್ಲಿ ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ಯಶಸ್ವಿಯಾಗಿದ್ದಾರೆ.  

ಕಾರ್ಗಲ್  ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ದಿನಾಂಕ 25-08-2025 ರಂದು  ಜೋಗ ಫಾಲ್ಸ್ ನಲ್ಲಿ  ರೌಂಡ್ಸ್ ನಲ್ಲಿ  ಇದ್ದಾಗ  ಒಬ್ಬ ವ್ಯಕ್ತಿಯು ಜೋಗ್ ಫಾಲ್ಸ್ ನಲ್ಲಿ ಇರುವ ಅತಿ ಅಪಾಯಕಾರಿ ಸ್ಥಳಗಳ ಬಗ್ಗೆ ಅಲ್ಲಿನ ಆಟೋ ಚಾಲಕರಲ್ಲಿ ವಿಚಾರಿಸಿದ್ದಿದ್ದು ಗಮನಕ್ಕೆ ಬಂದಿದೆ.

ಆತನ ಬಗ್ಗೆ ಅನುಮಾನ ಬಂದು,  ವಿಚಾರಿಸಲಾಗಿ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿ ಮಾಡುತ್ತಿದ್ದ ವ್ಯಕ್ತಿಯು ವ್ಯಾಪಾರದಲ್ಲಿ ನಷ್ಟಪಡಿಸಿಕೊಂಡಿದ್ದು, ತನ್ನ ಪೋಷಕರ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ, ಲಕ್ಷಗಟ್ಟಲೆ ಸಾಲ ಮಾಡಿ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಬೇಜಾರಾಗಿ ಸುಮಾರು 20 ದಿನದ ಹಿಂದೆ ಮನೆ ಬಿಟ್ಟು ಹೊರಗಡೆ ಬಸ್ ಸ್ಟ್ಯಾಂಡು ರೈಲ್ವೆ ಸ್ಟೇಷನ್ ಬೇರೆ ಬೇರೆ ಸ್ಥಳಗಳಲ್ಲಿ ವಾಸ್ತವ ಮಾಡಿ ನಂತರ ಸಾಯುವ ನಿರ್ಧಾರ ತೆಗೆದುಕೊಂಡು ಜೋಗ್ ಫಾಲ್ಸ್ ಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು.  

ಆತನಿಗೆ ಧೈರ್ಯ ತುಂಬಿ  ಮನವೊಲಿಸಿ  ಅವರ ಪೋಷಕರನ್ನು ಫೋನ್ ಮುಖಾಂತರ ಸಂಪರ್ಕಿಸಿ,  ವಾಪಸ್ ಬೆಂಗಳೂರಿನ ಮನೆಗೆ ಕಳಿಸಿ ಕೊಡಲಾಗಿದೆ. 

police persuaded a man in joga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close