SUDDILIVE || SHIVAMOGGA
ನೆಚ್ಚಿನ ಶಿಕ್ಷಕರ ವರ್ಗಾವಣೆಯಿಂದ ಮೂರು ದಿನದಿಂದ ಊಟ ಬಹಿಷ್ಕರಿಸಿದ ವಿದ್ಯಾರ್ಥಿಗಳು-Students boycott meals for three days over transfer of favorite teacher
ಸಾಗರ ತಾಲೂಕಿನ ಆನಂದಪುರದ ನೂರು ವರ್ಷದ ಇತಿಹಾಸವಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 46 ಜನ ವಿದ್ಯಾರ್ಥಿಗಳಿದ್ದು, ಈ ಬಾರಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಲಾಗಿತ್ತು.
ಇಂಗ್ಲೀಷ್ ಬೋಧನೆಯಲ್ಲಿ ನಾಗರತ್ನ ಹಾಗೂ ಶೀಲಾ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದರು, ಹಾಗೂ ಮಕ್ಕಳು ಒಡನೆ ಉತ್ತಮ ಬಾಂಧವ್ಯ ಹೊಂದಿದ್ದರು, ಇತ್ತೀಚಿಗೆ ಇವರಿಬ್ಬರನ್ನು ವರ್ಗಾವಣೆಗೊಳಿಸಲಾಗಿದ್ದು, ಇದೀಗ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕರ ವರ್ಗಾವಣೆಯಿಂದ ಬೇಸರಗೊಂಡಿದ್ದಾರೆ.
ನೆಚ್ಚಿನ ಶಿಕ್ಷಕರಿಲ್ಲದೆ ಇಂಗ್ಲಿಷ್ ಶಿಕ್ಷಣ ಕೂಡ ಕುಂಠಿತವಾಗಿದೆ ಹಾಗೂ ಮೂರು ದಿನದಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಹಾಗೂ ಮನೆಯಲ್ಲಿ ಊಟವನ್ನು ಬಹಿಷ್ಕರಿಸಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.
ಶಾಲೆಯಲ್ಲಿ ಪೋಷಕರ ಪ್ರೊಟೆಸ್ಟ್ :- ನೆಚ್ಚಿನ ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳು ಬಹಳ ಬೇಸರಗೊಂಡಿದ್ದಾರೆ ಹಾಗೂ ಶಾಲೆಗೆ ಹೋಗುವುದಿಲ್ಲ ಎಂದು ಮನನೊಂದಿದ್ದಾರೆ ಹೀಗಾಗಿ ಹಳೆಯ ಇಂಗ್ಲಿಷ್ ಶಿಕ್ಷಕರನ್ನು ನಮ್ಮ ಶಾಲೆಗೆ ವಾಪಸ್ ಕೊಡಿ ಎಂದು ಪೋಷಕರು ಮನವಿ ಮಾಡಿದ್ದಾರೆ.
ಶಾಸಕರಿಗೆ ವಿಶೇಷ ಮನವಿ ಮಾಡಿದ ಪೋಷಕರು :- ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ನಮ್ಮ ತಾಲೂಕಿನ ಶಾಸಕರು ದಯಮಾಡಿ ಇದರ ಬಗ್ಗೆ ಗಮನಹರಿಸಿ ನಮ್ಮ ಶಾಲೆಗೆ ಹಳೆಯ ಶಿಕ್ಷಕರನ್ನು ವಾಪಸ್ ಕಳುಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಕೈಮುಗಿದು ಪ್ರಾರ್ಥಿಸುತ್ತೇವೆ ಎಂದು ಪೋಷಕರು ಶಾಸಕರಲ್ಲಿ ವಿಶೇಷ ಮನವಿ ಮಾಡಿದರು.
Students boycott meals for three days over transfer of favorite teacher
