SUDDILIVE || SHIVAMOGGA
ಲಕ್ಕಿನಕೊಪ್ಪದಲ್ಲಿ ಪತ್ತೆಯಾದ ಸ್ಪೋಟಕ, ಕಳೆಬರಹಗಳ ಕುರುಹು ಪತ್ತೆ ಪ್ರಕರಣ ಯೂಟರ್ನ್-Explosives, traces of graffiti found in Lakkinakoppa - action taken by the department
![]() |
| ಘಟನಾಸ್ಥಳದಿಂದ ಅಳತೆದೂರದಲ್ಲಿರುವ ಖಾಸಗಿ ತೋಟಗಳು |
ಲಕ್ಕಿನಕೊಪ್ಪದಲ್ಲಿ ನಿನ್ನೆ ಜಿಂಕೆ ಚರ್ಮ, ಸ್ಪೋಟಕ ವಸ್ತುಗಳು, ಕಾಡುಪ್ರಾಣಿಯ ಕೊಂಬು ಮಾಂಸ ಮತ್ತು ಉರುಳು ಹಾಕಿದ ತಂತಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಯೂಟರ್ನ್ ಪಡೆದುಕೊಂಡಿದೆ. ಈ ಪ್ರಕರಣ ಷಡ್ಯಂತ್ರದ ಪ್ರಕರಣವಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಲಕ್ಕಿನಕೊಪ್ಪದಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರ ಷಡ್ಯಂತ್ರ್ಯವಿರಬಹುದಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸರ್ವೆ ನಂಬರ್ 23 ರಲ್ಲಿ ಪತ್ತೆಯಾದ ಈ ವಸ್ತುಗಳು ರಿಯಲ್ ಎಸ್ಟೇಟ್ ದಂಧೆಕೋರರ ಮತ್ತು ಸುತ್ತಮುತ್ತಲಿನ ತೋಟದ ಮಾಲೀಕರಿಂದಲೇ ಈ ಘಟನೆ ನಡೆಸಿರುವ ಅನುಮಾನಗಳು ವ್ಯಕ್ತವಾಗುತ್ತಿದೆ.
ಲಕ್ಕಿನಕೊಪ್ಪ ಮತ್ತು ಉಂಬ್ಳೆಬೈಲಿನ ಸುತ್ತಮುತ್ತ ಜಮೀನು ಒತ್ತುವರಿ ಹಾವಳಿ ಹೆಚ್ಚಿದೆ. ಲಕ್ಕಿನಕೊಪ್ಪದಲ್ಲಿ ಖಾಸಗಿ ಲೇಔಟ್ ಗಳಿಗೆ ಅರಣ್ಯ ಎನ್ ಒಸಿ ನೀಡಿಲ್ಲ. ಇದು ಸ್ಥಳೀಯರ ಕಣ್ಣು ಕೆಂಪಾಗಲು ಕಾರಣ ಎನ್ನಬಹುದು. ಸರ್ವೆ ನಂಬರ್ 21 ರಲ್ಲಿ ಅರಣ್ಯ ಇಲಾಖೆ ಟ್ರಂಚ್ ಹೊಡೆದು ಖಾಸಗಿಯವರ ತೋಟಕ್ಕೆ ಹೋಗದಂತೆ ನಿರ್ಬಂಧಿಸಿದರೂ ತೋಟದವರು ಟ್ರಂಚ್ ನ್ನೇ ಮುಚ್ಚಿ ತಮ್ಮತೋಟಕ್ಕೆ ದಾರಿ ಮಾಡಿಕೊಂಡಿದ್ದಾರೆ.
![]() |
| ಸಿಸಿಎಫ್ ಹನುಮಂತಪ್ಪ |
ಈ ಎಲ್ಲಾ ಹಿನ್ನಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಎಲ್ಲಾ ಅಸಮಾನತೆಯ ಮತ್ತೊಂದು ರೂಪವೇ ಈ ಕಾಡಿನಲ್ಲಿ ಬಾಂಬ್ ಸ್ಪೋಟದ ವಸ್ತು, ಅವಶೇಷಗಳು ಪತ್ತೆಯಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ ಒಂದು ಇಲಾಖಾ ತನಿಖೆ ನಡೆದರೆ ಮತ್ತೊಂದು ಕಡೆ ಪೊಲೀಸ್ ದೂರು ದಾಖಲಿಸುವುದಾಗಿ ಸಿಸಿಎಫ್ ಹನುಮಂತು ಸ್ಥಳ ವೀಕ್ಷಣೆಗೆ ತೆರಳಿದ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.
Explosives, traces of graffiti found in Lakkinakoppa - action taken by the department

