SUDDILIVE || SHIVAMOGGA
ಗುರು ರಾವ್ ಅಂಬೋರೆ ಇನ್ನಿಲ್ಲ- Guru Rao Ambore is no more
ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗ್ರೂಪ್ ಡಿ ನೌಕರರಾಗಿ ಕಳೆದ 8 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಗುರು ರಾವ್ ಅಂಬೋರೆ ವಿಧಿವಶರಾಗಿದ್ದಾರೆ. ಇವರಿಗೆ 36 ವರ್ಷ ವಯಸ್ಸಾಗಿತ್ತು.
ಅನ್ನನಾಳದಲ್ಲಿ ಸಮಸ್ಯೆಯಾಗಿ ಸಾವನ್ನಪ್ಪಿರುವ ಅಂಬೋರೆ ಅವರು ಭದ್ರಾವತಿಯ ಅಂಬೋರೆ ಪತ್ರಿಕೆಯ ಮಾಲೀಕ ಕೃಷ್ಣೋಜಿರಾವ್ ಅವರ ಪುತ್ರರಾಗಿದ್ದಾರೆ. ನಾಲ್ಕೈದು ದಿನಗಳ ಹಿಂದೆ ಅವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಅಸು ನೀಗಿದ್ದಾರೆ.
Guru Rao Ambore is no more
