SUDDILIVE || SHIVAMOGGA
ಪಾಲಿಕೆಯಿಂದ ಸ್ವಚ್ಛತಾ ಅರಿವು ಕಾರ್ಯಕ್ರಮ-Cleanliness awareness program by the corporation
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ರವಿವರ್ಮ ಬೀದಿ ಸೀಗೆಹಟ್ಟಿ ವಾರ್ಡ್ ಸಂಖ್ಯೆ 30ರಲ್ಲಿ ಇಂದು ಎಸ್. ಬಿ.ಎಂ 2.0 ನಗರ, ಯೋಜನೆಯಡಿ ಸ್ವಚ್ಚತಾ ಅರಿವು (ಘನ ತ್ಯಾಜ್ಯ ನಿರ್ವಹಣೆ) ಕುರಿತು ಕಾರ್ಯಕ್ರಮವನ್ನು ಆಯೋಜಿಸಿ ಶಾಲಾ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು.
ಹಸಿ - ತ್ಯಾಜ್ಯ, ಒಣ - ತ್ಯಾಜ್ಯ, ಗೃಹತ್ಪಾದಕ ಹಾನಿಕಾರಕ ತ್ಯಾಜ್ಯ ವನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಕಸ ಸಂಗ್ರಹಣ ವಾಹನಕ್ಕೆ ನೀಡಬೇಕು ಎಂದು ಅರಿವು ಮೂಡಿಸಲಾಯಿತು. ಮತ್ತು ಪ್ಲಾಸ್ಟಿಕ್ ನಿಷೇಧ, ಹಾಗೂ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಶ್ರಿಮತಿ ಗಂಗಮ್ಮ , ಸಹ ಶಿಕ್ಷಕರು ಶ್ರೀಯುತ ರಾಮಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ (BRP) ಶ್ರೀಯುತ ಧನಂಜಯ್ ಮತ್ತು ಶ್ರೀಯುತ ರಾಜಪ್ಪ , ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರು ಮತ್ತು ಕಮ್ಯೂನಿಟಿ ಮೊಬಲೈಸರ್ ರವರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.
Cleanliness awareness program by the corporation
