ಐದು ಲಕ್ಷ ನೀಡುವಂತೆ ಉದ್ಯಮಿಗೆ ಬೆದರಿಕೆ-Businessman threatened to pay five lakhs

 SUDDILIVE || SHIVAMOGGA

ಐದು ಲಕ್ಷ ನೀಡುವಂತೆ ಉದ್ಯಮಿಗೆ ಬೆದರಿಕೆ-Businessman threatened to pay five lakhs     

Businessman, threatened


ನಗರದ ಚೋರ್ ಬಜಾರ್ ನ ಉದ್ಯಮಿಯವರಿಗೆ ಐದು ಲಕ್ಷ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹಳೇ ದ್ವೇಷದ ಹಿನ್ನೆಲೆ ಜೈಲಿನಲ್ಲಿರುವ ಆರೋಪಿ ತನ್ನ ಸಹಚರನ ಮೂಲಕ ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಆರ್.ಎಂ.ಎಲ್ ನಗರದ ನಿವಾಸಿ ಹಾಗೂ ಚೋರ್ ಬಜಾರ್‌ನ ವ್ಯಾಪಾರಿ ಸೈಯದ್ ನಿಜಾಮುದ್ದೀನ್ ಅವರು ಈ ಸಂಬಂಧ ದೂರು ನೀಡಿದ್ದಾರೆ. ಮಾರ್ಚ್ 19ರಂದು ರಾತ್ರಿ 10:30ರ ಸುಮಾರಿಗೆ ನಿಜಾಮುದ್ದೀನ್ ಅವರು ಗಾಂಧಿ ಬಜಾರ್‌ನಲ್ಲಿದ್ದಾಗ, ಯುವಕನೊಬ್ಬ ಬಂದು ಅಣ್ಣ ಫೋನ್ ಮಾಡುತ್ತಿದ್ದಾರೆ ಮಾತನಾಡಿ ಎಂದು ಮೊಬೈಲ್ ನೀಡಿದ್ದಾನೆ.

ಸೈಯದ್ ನಿಜಾಮುದ್ದೀನ್ ಫೋನ್ ಸ್ವೀಕರಿಸಿದಾಗ ಮಾತನಾಡಿದ ವ್ಯಕ್ತಿ, ನಾಳೆ ಸಂಜೆಯೊಳಗೆ ₹5 ಲಕ್ಷ ಹಣ ಕೊಡಬೇಕು, ಇಲ್ಲದಿದ್ದರೆ ಹೊಡೆಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Businessman threatened to pay five lakhs

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close