SUDDILIVE || SHIVAMOGGA
ಶಿವಮೊಗ್ಗದಲ್ಲಿ ಸಿಡಿಲು ಮಿಂಚು ಸಮೇತ ಭರ್ಜರಿ ಮಳೆ- Heavy rain with lightning in Shivamogga
ನಾಲ್ಕು ದಿನಗಳ ಹಿಂದೆ ಆಲಿಕಲ್ಲು ಮಳೆ ಸುರಿದ ಶಿವಮೊಗ್ಗದಲ್ಲಿ ಇಂದು ಮತ್ತೆ ವರುಣನ ಕೃಪೆಯಾಗಿದೆ ಸತತ ಒಂದು ಗಂಟೆಯಿಂದ ವರುಣ ಬಿಡದೆ ಸುರಿಯುತ್ತಿದ್ದಾನೆ.
ಆರಂಭದಲ್ಲಿ ಗುಡುಗು ಮಿಂಚಿನ ನೊಂದಿಗೆ ಆರಂಭವಾದ ಮಳೆ ಯಾವ ಅಡ್ಡಿ ಆತಂಕವಿಲ್ಲದೆ ನಿರಂತರವಾಗಿ ಸುರಿಯಲಾರಂಭಿಸಿದೆ. ಈ ಬಾರಿ ಬೇಸಿಗೆ ಮಳೆಯ ನಿರೀಕ್ಷಿಸಿದ ಸಮಯಕ್ಕಿಂತ ಮೊದಲೇ ಸುರಿಯುತ್ತಿರುವುದು ಸಾಂಪ್ರದಾಯಿಕ ಮಳೆ ಕೊರತೆಗೆ ಕಾರಣವಾಗಬಹುದಾ ಎಂಬ ಅನುಮಾನವನ್ನೂ ಹುಟ್ಟಿಹಾಕಿದೆ.
ಬೇಸಿಗೆ ಮಳೆ ಬಹುತೇಕ ಏಪ್ರಿಲ್ ಅಂತ್ಯಕ್ಕೆ ಹಾಗೂ ಮೇ 15ರ ನಂತರ ಕಾಣಿಸಿಕೊಳ್ಳುತ್ತಿತ್ತು ಆದರೆ ಈ ಬಾರಿ ಮಾರ್ಚ್ ತಿಂಗಳ ಕೊನೆಯಲ್ಲಿಯೇ ಆರಂಭವಾಗಿರುವುದು ಎಲ್ಲಾ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಈ ಮಳೆಗೆ ಕಲ್ಲಂಗಡಿ, ಫನಾಪಲ್ , ಬಾಳೆ ಬೆಳೆಗಳು ಹಾನಿಯಾಗಲಿದೆ.
Heavy rain with lightning in Shivamogga

