SUDDILIVE || SHIVAMOGGA
ಎರಡು ಠಾಣ ವ್ಯಾಪ್ತಿಯಲ್ಲಿ ಬೆಳ್ಳಂಬಳಗ್ಗೆ ಗೋಮಾಂಸ ಅಡ್ಡ ಮೇಲೆ ಪೊಲೀಸ್ ರೈಡ್- Police raid in two police stations limits in Bellambalagge on beef smuggling
ಶಿವನೊಗ್ಗದ ಎರಡು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಗೋಮಾಂಸ ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆ ಹಿಂದೂ ಸಂಘಟನೆಯ ಮಾಹಿತಿಯ ಆಧಾರದ ಮೇರೆಗೆ ತುಂಗನಗರ ಪೊಲೀಸರು ಮತ್ತು ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.
ತುಂಗನಗರ ಪೊಲೀಸ್ ಠಾಣೆಯ ಟಿಪ್ಪುನಗರದಲ್ಲಿ ಮಾಜಿ ಕಾರ್ಪರೇಟರ್ ಶಾಮೀರ್ ಅವರ ಮನೆಯ ಮಗ್ಗಲಿನಲ್ಲೇ ಗೋಮಾಂಸವನ್ನ ಕಡಿದು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಆಧಾರದ ಮೇರೆಗೆ ಪಿಐ ಕೆ.ಟಿ ಗುರುರಾಜ್ ದಾಳಿ ನಡೆಸಿದ್ದಾರೆ ಈ ದಾಳಿಯಲ್ಲಿ ಇಬ್ಬರ ಬಂಧನವಾಗಿದೆ.
ಬಂಧನವಾದವರನ್ನ ಇಮ್ರಾನ್ ಮತ್ತು ಮೊಹಮದ್ ಅತೀಕ್ ಎಂದು ಗುರುತಿಸಲಾಗಿದೆ. ಅಪಾರ ಪ್ರಮಾಣದ ಗೋಮಾಂಸ ಪತ್ತೆಯಾಗಿದೆ. ಇದರ ಬೆನ್ನಲ್ಲೇ ದೊಡ್ಡಪೇಟೆ ಪೊಲೀಸ್ ಪಿಐ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಮಸೂದ್ ಎಂಬುವರ ಮನೆಯ ಮೇಲೆ ದಾಳಿ ನಡೆದಿದ್ದು ಮನೆಯಲ್ಲೇ ಅಪಾರ ಪ್ರಮಾಣದಲ್ಲಿ ಗೋಮಾಂಸ ಪತ್ತೆಯಾಗಿದೆ.
ಆಟೋವೊಂದರಲ್ಲೂ ಗೋಮಾಂಸ ಸಾಗಿಸಲಾಗುತ್ತಿತ್ತು ಎಂಬ ಆರೋಪವನ್ನ ಹಿಂದೂ ಸಂಘಟನೆ ಆರೋಪಿಸಿದರೂ ಆಟೋ ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಹಿಂದೂ ಸಂಘಟನೆ ಆರೋಪ ಸಹ ಮಾಡಿದೆ. ಈಗ ದಾಳಿ ನಡೆದ ಜಾಗವೆಲ್ಲವೂ ಎರಡನೇ ಬಾರಿಗೆ ದಾಳಿಯಾಗುತ್ತಿವೆ. ಗೋಹತ್ಯೆ ಕಾಯ್ದೆಯ ಆದಾರದ ಮೇರೆಗೆ ಎಸಿ ಅವರು ಬಂದು ಗೋಮಾಂಸ ಪತ್ತೆಯಾದ ಜಾಗವನ್ನ ಸೀಜ್ ಮಾಡಿ ಹೋಗಬೇಕು. ಇದನ್ನ ಮಾಡದ ಹಿನ್ನಲೆಯಲ್ಲಿ ಗೋಮಾಂಸ ಮಾರಾಟ ಮರುಕಳಿಸುತ್ತಿದೆ ಎಂದು ದೂರಿದೆ. ನಿನ್ನೆ ಡಿವೈಎಸ್ಪಿಗೆ ಗೋಮಾಂಸ ಹತ್ಯೆಕುರಿತು ಸಮಗ್ರ ಪತ್ರಬರೆದಿದ್ದ ಹಿಂದೂ ಸಂಘಟನೆ ಇಂದು ದಾಳಿ ನಡೆಸಿದೆ.
Police raid two police stations in Bellambalagge on beef smuggling

