ಮೇ.06 ರಂದು ಕುವೆಂಪು ವಿವಿಯಲ್ಲಿ ಘಟಿಕೋತ್ಸವ- Convocation at Kuvempu University on May 6th

 SUDDILIVE || SHIVAMOGGA

ಮೇ.06 ರಂದು ಕುವೆಂಪು ವಿವಿಯಲ್ಲಿ ಘಟಿಕೋತ್ಸವ- Convocation at Kuvempu University on May 6th    

Kuvempu, university

ಮೇ.06 ರಂದು ಕುವೆಂಪು ವಿಶ್ವ ವಿದ್ಯಾಲಯದಲ್ಲಿ 35 ನೇ ವಾರ್ಷಿಕ ಘಟಿಕೋತ್ಸವವನ್ನ ನಡೆಸಲಾಗುತ್ತಿದ್ದು ಎರಡು ವರ್ಷಗಳ ನಂತರ ಈ ಘಟಿಕೋತ್ಸವ ನಡೆಯುತ್ತಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕುಲಪತಿ ಶರತ್ ಅನಂತ ಮೂರ್ತಿ ಮೇ.06 ರಂದು ನಡೆಯುವ ಘಟಿಕೋತ್ಸವದಲ್ಲಿ 106 ಜನ ಪುರುಷ ಮತ್ತು 57 ಮಹಿಳೆಯರಿಗೆ ಪಿಹೆಚ್ ಡಿ ಪಡೆದಿದ್ದರೆ, 16955 ವಿದ್ಯಾರ್ಥಿಗಳಿಗೆ  ಪದವಿ ನೀಡಲಾಗುತ್ತಿದೆ. ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಆದರೆ ಅಂತಿಮ ಹಂತದಲ್ಲಿದೆ ಇಂದು ಬರುವ ನಿರೀಕ್ಷೆಯಿದೆ ಎಂದರು.

ಘಟಿಕೋತ್ಸವದಲ್ಲಿ 155 ಸ್ವರ್ಣಪದಕ, 21 ನಗದು ಬಹುಮಾನವನ್ನ 29 ವಿದ್ಯಾರ್ಥಿಗಳು ಹಂಚಿಕೊಳ್ಳಲಿದ್ದಾರೆ. ಅಭಿಶೇಕ ಎಂಎ ಕನ್ನಡದಲ್ಲಿ 10 ಸ್ವರ್ಣ ಪದಕ ಹಾಗೂ ಎರಡು ನಗದು ಬಹುಮಾನ ಪಡೆಯಲಿದ್ದಾರೆ. ಎಂಎಸ್ಸಿಯಲ್ಲಿ ಪರಿಸರ ವಿಜ್ಞಾನದ ವಿಷಯದಲ್ಲಿ ರಕ್ಷಾರವರು 7 ಸ್ವರ್ಣ ಪದಕ, ಜೈವಿಕ ತಂತ್ರಜ್ಞಾನದಲ್ಲಿ ಸೃಷ್ಠಿ ಆರ್ 6 ಸ್ವರ್ಣ ಪದಕ ಪಡೆದಿದ್ದಾರೆ. ಇದರ ಜೊತೆ ಹಲವು ವಿಭಾಗದಲ್ಲಿ ಪದಕಗಳನ್ನ ಪಡೆದಿದ್ದಾರೆ ಎಂದರು.

ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್, ಪ್ರೊ.ಅನಿಲ್ ಡಿ ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ ಎಂದರು. 

ಅನುಮಾನವಿದೆ, ತನಿಖೆಯಲ್ಲಿದೆ

ಮೊನ್ನೆ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆ ನಡೆಸಿದ ಪ್ರತಿಭಟನೆಯಲ್ಲಿ ವಿಶ್ವವಿದ್ಯಾಲಯದ ಪಾಟ್ ಗಳು ಹೊಡೆದಿರುವ ಹಿಂದೆ ಕೆಲವರ ಕೈವಾಡಗಳಿರುವ ಅನುಮಾನಗಳಿವೆ. ಈ ಪ್ರಕರಣ ಪೊಲಿಸ್ ತನಿಖೆಯಿರುವ ಕಾರಣ ಯಾರ ಹೆಸರನ್ನೂ ಬಹುರಂಗ ಪಡಿಸಲಾಗುವುದಿಲ್ಲ ಎಂದರು.

ಮೂರು ವರ್ಷದಿಂದ ಮಾರ್ಕ್ಸ್ ಕಾರ್ಡ್ ಕೊಡ್ತಾಯಿಲ್ಲ

ಮಾರ್ಕ್ಸ್ ಕಾರ್ಡ್ ನೀಡದೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀಳಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿವಿಯ ಕುಲಸಚಿವರು ಮಾರ್ಕ್ ಕಾರ್ಡ್ ವಿತರಿಸದಂತೆ ಸರ್ಕಾರ ಆದೇಶವಿದೆ. ಯುಜಿಸಿ ಪ್ರಕಾರ ಫೇಕ್ ಪಿಹೆಚ್ ಡಿ ಮಾರ್ಕ್ಕ ಕಾರ್ಡ್ ತಡೆಹಿಡಿಯಲು ಡಿಜಿ ಲಾಕರ್ ಮೂಲಕ ಮಾರ್ಕ್ಸ್ ಕಾರ್ಡ್  ಡೌನ್ ಲೌಡ್ ಮಾಡಿಕೊಳ್ಳಬೇಕು. ವಿವಿ ಮಾರ್ಕ್ಸ್ ಕಾರ್ಡ್ ಕೊಡಲ್ಲ ಇದು ನಿಂತು ಮೂರು ವರ್ಷ ಆಗಿದೆ ಎಂದರು. 

ಎಲ್ಲಾ ಪರಿಕ್ಷಾಂಗ ವಿಭಾಗದ ಅಧಿಕಾರಿಗಳ ಜೊತೆ  ಪೂರ್ವ ಭಾವಿ ಸಭೆ ನಡೆಸಿ ಫಲಿತಾಂಶ ಕೊಡುವ ಬಗ್ಗೆ ಶೀಘ್ರದಲ್ಲಿಯೇ ಫಲಿತಾಂಶ ಪ್ರಕಟದ ಬಗ್ಗೆ ಚರ್ಚಿಸಲಾಗುವುದು. ಇದರ ಜೊತೆಗೆ ಮೀಡಿಯಾ ಬುಲಿಟಿನ್ ಜೊತೆ ವಿದ್ಯಾರ್ಥಿಗಳಿಗೆ ಅಪ್ ಟೇಟ್ ಮಾಡಲಿದ್ದೇವೆ ಎಂದರು. 

Convocation at Kuvempu Univerಮsity on May 6th

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close