ಬ್ರಾಂಕ್ಲೆಟ್ ನಲ್ಲಿ ಗಾಂಜಾನಿಟ್ಟು ಜೈಲಿನಲ್ಲಿ ಸಾಗಿಸುವ ಪ್ರಯತ್ನ-Attempt to smuggle marijuana into prison in a backpack

 SUDDILIVE || SHIVAMOGGA

ಬ್ರಾಂಕ್ಲೆಟ್ ನಲ್ಲಿ ಗಾಂಜಾನಿಟ್ಟು ಜೈಲಿನಲ್ಲಿ ಸಾಗಿಸುವ ಪ್ರಯತ್ನ-Attempt to smuggle marijuana into prison in a backpack 

Prison, Marijuana

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಬಂಧಿಗಳನ್ನ ನೋಡಲು ಬರುವ ಸಂದರ್ಶಕರಿಂದ ಗಾಂಜಾ ನೀಡುವ ಪ್ರಯತ್ನಗಳು ನಿರಂತರವಾಗಿ ಮುಂದುವರೆದಿದ್ದು ಅದರಂತೆ ಜೈಲ್ ಅಧಿಕಾರಿಗಳು ಮತ್ತು KSISF ಅಧಿಕಾರಿಗಳು ತಡೆಯುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. 

ಶಿವಮೊಗ್ಗ ಕೇಂದ್ರ ಕಾರಾಗೃಹದದಲ್ಲಿ ಇರುವ ಬಂಧಿಗಳನ್ನ ನೋಡಲು ಬರುವ ನೆಂಟರು, ಸ್ನೇಹಿತರು, ಪರಿಚಿತರು ಆತನನ್ನ ಅಪರಾಧದಿಂದ ಹೊರಗೆ ತರುವ ಪ್ರಯತ್ನ ಮಾಡುವುದಕ್ಕಿಂತ ಇನ್ನಷ್ಟು ಅಪರಾಧ ಮಾಡುವುದಕ್ಕೆ ಪ್ರಚೋದಿಸುತ್ತಿದ್ದಾರೆ ಎಂಬ ಸತ್ಯವು ಸಹ ಇದರಿಂದ ಬಹಿರಂಗಗೊಳ್ಳುತ್ತಿದೆ. 

ಈ ಮೊದಲು, ಖೈದಿಗಳಿಗೆ ಆಹಾರ ನೀಡುವ ಬಾಳೆ ಗೊನೆಯಲ್ಲೇ, ಬಟ್ಟೆಯನ್ನ ನೀಡುವ ನೆಪದಲ್ಲಿ, ಬೇಕರಿ ತಿನಿಸು ವಸ್ತುವಿನಲ್ಲಿ ಗಾಂಜಾ ಸಾಗಿಸುವ ಪ್ರಯತ್ನ ನಡೆದಿದ್ದರೆ, ಮತ್ತೊಂದು ಭಾಗವಾಗಿ ಜೈಲಿನಲ್ಲೇ  ಟೇಪು ಸುತ್ತಿ ಬಿಸಾಕಿರುವ ವಸ್ತುಗಳು ಸಹ ಪತ್ತೆಯಾಗಿತ್ತು. ಅದರಲ್ಲಿ ಗಾಂಜಾ ಇದ್ದಿದ್ದು ಬೆಳಕಿಗೆ ಬಂದಿತ್ತು. ಈಗ ಅದರಂತೆಯೆ ಖೈದಿ ಯೋರ್ವನನ್ನ ನೋಡಲು ಬಂದಿದ್ದ ಸಂದರ್ಶಕನಿಂದ ಗಾಂಜಾ ಸಾಗಿಸುವ ಪ್ರಯತ್ನ ನಡೆದು ಆಕ್ಸೆಸ್ ಕಂಟ್ರೋಲ್ ರೂಮ್ ನಲ್ಲಿ ಜೈಲು ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. 

ವಿಚಾರಣ ಬಂಧಿಯಾಗಿರುವ ಮೊಹಮದ್ ಶೋಯೆಬ್ ಬಿನ್ ಮೊಹಮದ್ ಶಫಿಯನ್ನ ನೋಡಲು ಬಂದಿದ್ದ ಟಿಪ್ಪುನಗರದ ನಿವಾಸಿ ಕಲೀಂ ಬಿನ್ ಮೊಹಮದ್ ಮಕ್ಲೇಸಿನ್ ಬೇಕರಿ ತಿನಿಸು, ಬಟ್ಟೆ ಮತ್ತು ಬ್ರಾಂಕ್ಲೆಟ್ ನ್ನ ತಂದಿದ್ದನು. ಜೈಲಿನ ಮುಖ್ಯ ದ್ವಾರದ ಬಳಿಯಿರುವ ಆಕ್ಸೆಸ್ ಕೊಠಡಿಯಲ್ಲಿ ಇವುಗಳನ್ನ ತಪಾಸಣೆ ಮಾಡುವಾಗ ಬ್ರಾಂಕ್ಲೆಟ್ ನಲ್ಲಿ ಗಾಂಜಾ ಪತ್ತೆಯಾಗಿವೆ. 

ಗಾಂಜಾ ಪತ್ತೆಯಾದ ಬೆನ್ನಲ್ಲೇ ಸಂದರ್ಶಕ ಕಲೀಂ ಮತ್ತು ಖೈದಿ ಮೊಹಮದ್ ಶೋಯೆಬ್ ವಿರುದ್ಧ ತುಂಗ ನಗರದಲ್ಲಿ ದೂರು ದಾಖಲಾಗಿವೆ. 

Attempt to smuggle marijuana into prison in a backpack 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close