SUDDILIVE || SHIVAMOGGA
ಮನೆಗಳ್ಳತನ ತಡೆಯಲು ಲಾಕ್ಡ್ ಹೌಸ್ ಬೀಟ್ ಸಿಸ್ಟಮ್-ಎಸ್ಪಿ ನಿಖಿಲ್- Locked house beat system to prevent house theft-SP Nikhil
ಮನೆಕಳ್ಳತನ ಹೆಚ್ಚಾದ ಪರಿಣಾಮ ಶಿವಮೊಗ್ಗದ ಪೊಲೀಸ್ ವತಿಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಎಂಬ ಮೊಬೈಲ್ ವಾಟ್ಸಪ್ ಗ್ರೂಪ್ ಗಳನ್ನ ಆರಂಭಿಸಲಾಗಿದೆ. ಅದಕ್ಕಾಗಿ 8277982901 ವಾಟ್ಸಪ್ ನಂಬರ್ ಕೊಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಪಿ ನಿಖಿಲ್ ಬಿ, ಒಂಟಿ ಮನೆ ಮತ್ತು ವೃದ್ಧರೊಬ್ಬರೆ ಇರುವವರಿಗೆ ಆಸರೆ ಎಂಬ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ವೃದ್ಧರೊಂದಿಗೆ ನಮ್ಮ ಇಲಾಖೆ ನಿರಂತರ ಸಂಪರ್ಕದಲ್ಲಿದೆ. ಈ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ನಲ್ಲಿ ಬೀಗ ಹಾಕಿದ ಮನೆಗಳ ಸುರಕ್ಷತೆಯ ಸಂಬಂಧ ಪೊಲೀಸ್ ಇಲಾಖೆ ನೂತನ ಸುರಕ್ಷತಾ ಕ್ರಮವನ್ನು ಕೈಗೊಂಡಿದೆ. ಈ ವ್ಯವಸ್ಥೆಯನ್ನ ಇಂದಿನಿಂದಲೇ ಜಾರಿ ಮಾಡಲಾಗಿದೆ ಎಂದರು.
ಮನೆಯವರೆಲ್ಲರೂ ಪ್ರಯಾಣಕ್ಕೆ ಹೊರಟಿದ್ದರೆ ಮನೆ ಸುರಕ್ಷತೆಗಾಗಿ ವಾಟ್ಸಾಪ್ನಲ್ಲಿ ಮೂರು ಹಂತ ವನ್ನು ಪಾಲಿಸುವಂತೆ ಅವರು ತಿಳಿಸಿದ್ದಾರೆ. ಮನೆಯಿಂದ ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕವನ್ನು ನಮೂದಿಸುವಂತೆ ಮನೆಯ ವಿಳಾಸ ಮತ್ತು ಲೊಕೇಶನ್ ಹಾಗೂ ಮನೆ ಮುಂದಿನ ಸೆಲ್ಫಿಯನ್ನು ವಾಟ್ಸಪ್ ನಲ್ಲಿ ಫೋಟೋ ಮೂಲಕ ಹಾಕಲು ಎಸ್ ಪಿ ಅವರು ತಿಳಿಸಿದ್ದಾರೆ.
ಗಾಂಜಾ ಪ್ರಕರಣ
ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗಿ ಇವುಗಳಿಂದ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲಿಯೇ ಪೊಲೀಸ್ ಇಲಾಖೆ ಮಾದಕ ದ್ರವ್ಯ ಗಾಂಜಾ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದು ಮೇವೊಂದರ ತನಕ ಈ ಕುರಿತಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಮಾದಕ ದ್ರವ್ಯ ಸೇವನೆ ಎಲ್ಲಿ ರೂ.153 ಗಾಂಜಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 290 ಆರೋಪಿಗಳನ್ನು ಬಂಧಿಸಲಾಗಿದೆ 18 ಪ್ರಕರಣಗಳನ್ನು ಗಂಭೀರ ಪ್ರಕರಣವೆಂದು ಗುರುತಿಸಲಾಗಿದ್ದು ಇದರಲ್ಲಿ 40 ಆರೋಪಿಗಳನ್ನು ಗುರುತಿಸಲಾಗಿದೆ.
ಮೂರು ಸಪ್ಲೈ ರೂಟುಗಳನ್ನು ಜಿಲ್ಲೆಯ ಪೊಲೀಸರು ಭೇದಿಸಿದ್ದು ಬಹುತೇಕ ಗಾಂಜಾ ಪ್ರಕರಣಗಳು ನಗರಕ್ಕೆ ಹಾಗೂ ಜಿಲ್ಲೆಗೆ ಒಡಿಸ್ಸಾ ಮತ್ತು ಆಂಧ್ರಪ್ರದೇಶದಿಂದ ಬರುತ್ತಿರುವುದಾಗಿ ತಿಳಿದು ಬಂದಿದೆ ಮೂರು ಪೆಡ್ಲರ್ ಗಳನ್ನು ಬಂಧಿಸಿ ಅವರಿಗೆ ನ್ಯಾಯಾಂಗ ಬಂದನಕ್ಕೆ ಒಳಪಡಿಸಲಾಗಿದೆ.
290 ಜನ ಆರೋಪಿಗಳಲ್ಲಿ 50 ಎರಡು ಜನರನ್ನು ಮಾದಕ ವಸ್ತುಗಳ ವ್ಯಾಸನಿ ಕೇಂದ್ರದಿಂದ ಸಂಪೂರ್ಣ ವ್ಯಸನ ಮುಕ್ತರನ್ನಾಗಿ ಮಾಡಲಾಗಿದೆ ಇವುಗಳಲ್ಲಿ ಡ್ರಾಪೌಟ್ ಆದ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು ಇವರುಗಳು ಕೆಲಸಕ್ಕೆ ಹೋಗುವುದರಿಂದ ಹಣ ಪಡೆದು ಮೊದಲು ಸಿಗರೇಟ್ ಸೇದುವುದು ನಂತರ ಗಾಂಜ ವ್ಯಸನಿಗಳಾಗುತ್ತಿರುವುದು ತಿಳಿದು ಬರುತ್ತಿದೆ ಇವುಗಳಲ್ಲಿ 10 12ನೇ ತರಗತಿಯಲ್ಲಿ ಡ್ರಾಪೌಟ್ ಆದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.
ಅಕ್ಕಪಡೆ
ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ವಶಗುವ ಅಸಭ್ಯವಾಗಿ ವರ್ತಿಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ನೃತ್ಯ ಕ್ರಮ ಜರುಗಿಸುವ ಉದ್ದೇಶದಲ್ಲಿ ಶಿಮೊಗ್ಗ ನಗರದಲ್ಲಿ ಅಕ್ಕಪಡೆ ಕಾರ್ಯ ನಿರ್ವಹಿಸುತ್ತಿದೆ ಅಕ್ಕಪಡೆಯು ಸಾರ್ವಜನಿಕ ಉಪಟಳ ನೀಡಿದ ಒಟ್ಟು 156 ಜನ ಆ ಸಾಮಿಗಳ ವಿರುದ್ಧ ಲಘು ಪ್ರಕರಣಗಳು ದಾಖಲಾಗಿದೆ ಎಂದು ಅವರು ತಿಳಿಸಿದರು.
Locked house beat system to prevent house theft-SP Nikhil
