ಕೇಂದ್ರವನ್ನ ವಜಾಗೊಳಿಸುವಂತೆ ಆಗ್ರಹಿಸಿ NSUI ಪ್ರತಿಭಟನೆ-NSUI protests demanding dismissal of the Centre

SUDDILIVE || SHIVAMOGGA

ಕೇಂದ್ರವನ್ನ ವಜಾಗೊಳಿಸುವಂತೆ ಆಗ್ರಹಿಸಿ NSUI ಪ್ರತಿಭಟನೆ-NSUI protests demanding dismissal of the Centre   

Nsui, protest

Nsui, protest


ನೀಟ್ ಪ್ರಶ್ನೆಪತ್ರಿಕೆ ಲೀಕ್- ಮರು ಪರೀಕ್ಷೆಗೆ ನಿರ್ಧಾರವನ್ನ‌ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಎನ್ ಎಸ್ ಯುಐ ಇಂದು ಪ್ರತಿಭಟನೆ ನಡೆಸಿದೆ. ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಎನ್ಎಸ್ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು  ಪ್ರತಿಭಟನೆ ನಡೆಸಿ ನೀಟ್ ಪರೀಕ್ಷೆ ನಡೆಸಲು ವಿಫಲವಾಗಿರುವ ಕೇಂದ್ರ ಸರ್ಕಾರವನ್ನ ವಜಾಗೊಳಿಸುವಂತೆ ರಾಷ್ಟ್ರಪತಿಳಿಗೆ ಮನವಿ ಮಾಡಲಾಯಿತು. 

ಮಾನವ ಸರಪಳಿ ರಚಿಸಿ, ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಹಾಗೂ ಪರೀಕ್ಷಾ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಘೋಷಣೆ ಕೂಗಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡ್ತಿದೆ ಎಂದು ಪ್ರತಿಭಟಿಸಲಾಗಿದೆ. 

ಪರೀಕ್ಷೆ ನಡೆಸಲು ಸರ್ಕಾರ ವಿಫಲವಾಗಿದೆ ಸರಿಯಾಗಿ ಪರೀಕ್ಷೆ ನಡೆಸದಿದ್ರೇ ತೀವ್ರ ಹೋರಾಟದ ಎಚ್ಚರಿಕೆಯನ್ನ  ಪ್ರತಿಭಟನಾಕಾರರು ನೀಡಿದ್ದಾರೆ. 

ಈ ಸಂದರ್ಭದಲ್ಲಿ NSUI ನ ಜಿಲ್ಲಾಧ್ಯಕ್ಷ ವಿಜಯಕುಮಾರ್ ಕಾರ್ಯಧ್ಯಕ್ಷ ರವಿ ಕಾಟಿಕೆರೆ ನಗರಧ್ಯಕ್ಷ ರವಿಕುಮಾರ್ ಪ್ರಮುಖರಾದ ಚಂದ್ರೋಜಿ ರಾವ್, ಆದಿತ್ಯ, ಸುಭಾನ್,ವರುಣ್,ಅಭಿಷೇಕ್, ಯೂಸಫ್, ಅಲಾನ್, ಆಕಾಶ್, ಹಾಲಸ್ವಾಮಿ, ಶಂಕರ್, ಶ್ರೀಕಾಂತ್, ಸೃಜನ್, ಲೋಹಿತ್ ಉಪಸ್ಥಿತರಿದ್ದರು. 

https://www.suddilive.in/2026/05/Yeshwantpur-Talaguppa-weekly-express-train-services-to-continue.html

NSUI protests demanding dismissal of the Centre 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close