8 ಗಂಟೆಗಳ ಕಾರ್ಯಾಚರಣೆ, 74 ದ್ವಿಚಕ್ರ ವಾಹನಗಳು ವಶಕ್ಕೆ, ಇದು ಕೊನೆಯ ಎಚ್ಚರಿಕೆ ಎಂದ ಎಸ್ಪಿ ನಿಖಿಲ್.ಬಿ-8-hour operation, 74 two-wheelers seized, SP Nikhil B said this is the last warning

 SUDDILIVE || SHIVAMOGGA

8 ಗಂಟೆಗಳ ಕಾರ್ಯಾಚರಣೆ, 74 ದ್ವಿಚಕ್ರ ವಾಹನಗಳು ವಶಕ್ಕೆ, ಇದು ಕೊನೆಯ ಎಚ್ಚರಿಕೆ ಎಂದ ಎಸ್ಪಿ ನಿಖಿಲ್.ಬಿ-8-hour operation, 74 two-wheelers seized, SP Nikhil B said this is the last warning    

Whehicle, seized

ಶಿವಮೊಗ್ಗ: ಇ-ಚಲನ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಂಬರ್ ಪ್ಲೇಟ್ ಇಲ್ಲದೆ ಅಥವಾ ನಿಯಮಬಾಹಿರ (ಡಿಫೆಕ್ಟಿವ್) ನಂಬರ್ ಪ್ಲೇಟ್ ಅಳವಡಿಸಿ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಶಿವಮೊಗ್ಗ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 74 ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ಟ್ರಾಫಿಕ್ ವೃತ್ತದ ವತಿಯಿಂದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳ ಸಹಯೋಗದಲ್ಲಿ ನಡೆದ ಸುಮಾರು ಎಂಟು ಗಂಟೆಗಳ ಕಾರ್ಯಾಚರಣೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಹಾಗೂ ನಿಯಮಬಾಹಿರ ನಂಬರ್ ಪ್ಲೇಟ್ ಹೊಂದಿದ್ದ 74 ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ. 

ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ 74 ಡಿಫೆಕ್ಟ್ ದ್ವಿಚಕ್ರ ವಾಹನಗಳನ್ನ ತರಲಾಗಿತ್ತು. ಈ ವೇಳೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಅವರು ತಪಾಸಣೆ ನಡೆಸಿ ನಂತರ ವಾಹನ ಚಲಾಯಿಸುವ ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು. 


ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ, "ಇದು ಕೊನೆಯ ಎಚ್ಚರಿಕೆ. ಸದ್ಯಕ್ಕೆ ವಾಹನ ಮಾಲೀಕರಿಗೆ ದಂಡ ವಿಧಿಸಿ, ನೋಟಿಸ್ ನೀಡಿ ವಾಹನಗಳನ್ನು ಹಿಂತಿರುಗಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಉಲ್ಲಂಘನೆ ಕಂಡುಬಂದರೆ ನೇರವಾಗಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ಎಚ್ಚರಿಕೆ ನೀಡಿದರು.

ನಂಬರ್ ಪ್ಲೇಟ್ ಇಲ್ಲದ ಅಥವಾ ನಿಯಮಬಾಹಿರ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸಾಧ್ಯತೆ ಇರುವುದರಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ವಾಹನಗಳಿಗೆ ನಿಗದಿತ ಗಾತ್ರ, ವಿನ್ಯಾಸ ಮತ್ತು ಫಾಂಟ್‌ನಲ್ಲಿಯೇ ನಂಬರ್ ಪ್ಲೇಟ್ ಅಳವಡಿಸಬೇಕು. ಕೆಲವರು ನಂಬರ್ ಪ್ಲೇಟ್‌ಗಳನ್ನು ಬಾಗಿಸಿ ಅಥವಾ ಓದಲು ಸಾಧ್ಯವಾಗದಂತೆ ಮಾರ್ಪಡಿಸುತ್ತಿದ್ದು, ಅಂತಹ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

"ವಾಹನದ ಅಲಂಕಾರಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ವಾಹನ ಖರೀದಿಸುತ್ತಾರೆ. ಆದರೆ ನಿಯಮಾನುಸಾರ ನಂಬರ್ ಪ್ಲೇಟ್ ಅಳವಡಿಸಲು ಹಿಂಜರಿಯುತ್ತಾರೆ. ಇದು ಸರಿಯಲ್ಲ. ಎರಡು ಕೋಟಿ ರೂಪಾಯಿ ಮನೆ ಕಟ್ಟಿದರೂ ಸಿಸಿಟಿವಿ ಅಳವಡಿಸದಂತೆಯೇ ಇದು ಕೂಡ ತಪ್ಪೇ," ಎಂದು ಎಸ್‌ಪಿ ನಿಖಿಲ್ ಬಿ ಹೇಳಿದರು.

ಮಳೆ ನಡುವೆಯೂ ಟ್ರಾಫಿಕ್ ಇನ್ಸ್‌ಪೆಕ್ಟರ್‌ಗಳು, ಸಬ್‌ಇನ್ಸ್‌ಪೆಕ್ಟರ್‌ಗಳು, ಆಲ್ಫಾ ಸಿಬ್ಬಂದಿ ಸೇರಿದಂತೆ ಎಲ್ಲಾ ಪೊಲೀಸ್ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿಯೂ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ವಿಶೇಷ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

8-hour operation, 74 two-wheelers seized, SP Nikhil B said this is the last warning

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close