ಎರಡು ಪ್ರತೇಕ ಮಾದಕ ವಸ್ತುಗಳ ಪ್ರಕರಣ ಇಬ್ಬರು ಬಂಧನ-Two arrested in two separate drug cases

 SUDDILIVE || SHIKARIPURA || SHIVAMOGGA

ಎರಡು ಪ್ರತೇಕ ಮಾದಕ ವಸ್ತುಗಳ ಪ್ರಕರಣ ಇಬ್ಬರು ಬಂಧನ-Two arrested in two separate drug cases

Drug, case
ಶಿಕಾರಿಪುರದಲ್ಲಿ ಮೊಮದ್ ಗೌಸ್ ಬಂಧನ

Drug, case
ದೊಡ್ಡಪೇಟೆ ಪೊಲೀಸರಿಂದ ಶಾಹೀದ್ ಖಾನ್ ಬಂಧನ

ಶಿವಮೊಗ್ಗ ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ ವಿರುದ್ಧ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಗಾಂಜಾ, ಎಂಡಿಎಂಎ ಹಾಗೂ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಶಿಕಾರಿಪುರದಲ್ಲಿ ಗಾಂಜಾ ಮಾರಾಟ: 113 ಗ್ರಾಂ ಗಾಂಜಾ ವಶ, ಆರೋಪಿ ಬಂಧನ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರಾಪುರ ಗ್ರಾಮಕ್ಕೆ ಹೋಗುವ ರಸ್ತೆಯ ಓವರ್‌ಹೆಡ್ ಟ್ಯಾಂಕ್ ಸಮೀಪ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದರು.

ಕಾರ್ಯಾಚರಣೆಯಲ್ಲಿ 36 ವರ್ಷದ ಮಹಮ್ಮದ್ ಗೌಸ್ ಎಂಬ ಆರೋಪಿಯನ್ನು ಬಂಧಿಸಿ, ಸುಮಾರು ₹3,000 ಮೌಲ್ಯದ 113 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0103/2026ರಡಿ ಎನ್‌ಡಿಪಿಎಸ್ ಕಾಯ್ದೆ, 1985 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಶಿವಮೊಗ್ಗ ದೊಡ್ಡಪೇಟೆಯಲ್ಲಿ ಎಂಡಿಎಂಎ ಮಾರಾಟ: ₹1.52 ಲಕ್ಷ ಮೌಲ್ಯದ ಡ್ರಗ್ಸ್, ಬೈಕ್ ವಶ

ಇನ್ನೊಂದೆಡೆ, ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ 100 ಅಡಿ ರಸ್ತೆಯಿಂದ ಅಣ್ಣನಗರ ಕಡೆಗೆ ಹೋಗುವ ತುಂಗಾ ಚಾನೆಲ್ ರಸ್ತೆ ಬದಿಯಲ್ಲಿ ಎಂಡಿಎಂಎ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು.

ಈ ವೇಳೆ 40 ವರ್ಷದ ಶಾಹೀದ್ ಖಾನ್ ಎಂಬಾತನನ್ನು ಬಂಧಿಸಿ, ಸುಮಾರು ₹1.52 ಲಕ್ಷ ಮೌಲ್ಯದ 15.21 ಗ್ರಾಂ ಎಂಡಿಎಂಎ ಹಾಗೂ ಮಾದಕ ವಸ್ತು ಸಾಗಾಟಕ್ಕೆ ಬಳಸಲಾಗಿದ್ದ ಸುಮಾರು ₹40 ಸಾವಿರ ಮೌಲ್ಯದ ಮೋಟಾರ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0229/2026ರಡಿ ಎನ್‌ಡಿಪಿಎಸ್ ಕಾಯ್ದೆ, 1985 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಪೊಲೀಸ್ ಇಲಾಖೆ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Two arrested in two separate drug case

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close