SUDDILIVE || SHIVAMOGGA
ಶಿವಮೊಗ್ಗ ಜಿಲ್ಲಾ ಕುಸ್ತಿ ಕ್ರೀಡಾಂಗಣ ಉಳಿವಿಗೆ ಮನವಿ-Appeal for the survival of the Shivamogga District Wrestling Stadium
ಶಿವಮೊಗ್ಗ: ಜಿಲ್ಲೆಯ ಅನೇಕ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಹೆಮ್ಮೆಯ ಕೇಂದ್ರವಾಗಿರುವ ಶಿವಮೊಗ್ಗ ಜಿಲ್ಲಾ ಕುಸ್ತಿ ಕ್ರೀಡಾಂಗಣವನ್ನು ಮುಂದುವರೆಸುವಂತೆ ಒತ್ತಾಯಿಸಿ ಜಿಲ್ಲಾ ಕುಸ್ತಿ ಅಭಿವೃದ್ದಿ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ, ಹಲವು ವರ್ಷಗಳಿಂದ ವಿಶ್ವಯಕ್ಕ ಸಂಬಂದಿಗೀದಂತೆ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗ ಜಿಲ್ಲಾ ಕುಸ್ತಿಗೆ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಅನೇಕ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ ಎಂದು ತಿಳಿಸಲಾಗಿದೆ. ಜಿಲ್ಲೆಯ ಕುಸ್ತಿ ಕ್ರೀಡಾ ಶಾಲೆಯನ್ನು ಮುಂದುವರೆಸಿದರೆ ಜಿಲ್ಲೆಯ ಹಲವಾರು ಕುಸ್ತಿ ಪಟುಗಳಿಗೆ ಬೆಳೆಯಲು ಅವಕಾಶ ದೊರೆಯುವುದರ ಜೊತೆಗೆ ಕುಸ್ತಿಯಲ್ಲಿ ಉನ್ನತ ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
ದಯವಿಟ್ಟು ಕ್ರೀಡಾ ಶಾಲೆಯನ್ನು ಮುಂದುವರೆಸಲು ಕ್ರಮ ಕೈಗೊಳ್ಳಬೇಕು. ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಿಸುವ ಅಥವಾ ಸ್ಥಗಿತಗೊಳಿಸುವ ಯಾವುದೇ ಕ್ರಮದಿಂದ ಜಿಲ್ಲೆಯ ಕ್ರೀಡಾಪಟುಗಳಿಗೆ ತೊಂದರೆಯಾಗಲಿದ್ದು, ಕುಸ್ತಿ ಅಭಿವೃದ್ದಿ ಸಂಘದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಸಂಘ ಮನವಿ ಮಾಡಿದೆ.
ಕುಸ್ತಿ ಕ್ರೀಡೆಯ ಬೆಳವಣಿಗೆ ಮತ್ತು ಯುವ ಪ್ರತಿಭೆಗಳ ಭವಿಷ್ಯದ ದೃಷ್ಟಿಯಿಂದ ಕ್ರೀಡಾ ಶಾಲೆಯನ್ನು ಉಳಿಸಬೇಕೆಂದು ಸಂಘ ಆಗ್ರಹಿಸಿದೆ.
Appeal for the survival of the Shivamogga District Wrestling Stadium

