ಹಿಂದೂ ಹುಲಿ ಈಶ್ವರಪ್ಪ 78ನೇ ಜನ್ಮದಿನ: ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಆಚರಣೆ- Hindu Tiger Eshwarappa's 78th birthday: A grand celebration with religious programs

 SUDDILIVE || SHIVAMOGGA

ಹಿಂದೂ ಹುಲಿ ಈಶ್ವರಪ್ಪ 78ನೇ ಜನ್ಮದಿನ: ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಆಚರಣೆ- Hindu Tiger Eshwarappa's 78th birthday: A grand celebration with religious programs  

Hindu, tiger

ಶಿವಮೊಗ್ಗ, ಜೂನ್ 8: ಹಿಂದೂ ಹುಲಿ ಎಂದೇ ಖ್ಯಾತರಾಗಿರುವ ಮಾಜಿ ಉಪಮುಖ್ಯಮಂತ್ರಿ K. S. Eshwarappa ಅವರ 78ನೇ ಜನ್ಮದಿನವನ್ನು ವಿವಿಧ ಸಂಘ-ಸಂಸ್ಥೆಗಳು ಹಾಗೂ ಅಭಿಮಾನಿ ಬಳಗಗಳು ಅದ್ದೂರಿಯಾಗಿ ಆಚರಿಸಲು ಸಜ್ಜಾಗಿವೆ.

ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗ ಹಾಗೂ ಈಶ್ವರಪ್ಪ ಅವರ ಕಟ್ಟರ್ ಅಭಿಮಾನಿ ವಿಶ್ವಾಸ್ ಮಾತನಾಡಿ, ಮಾರಿಕಾಂಬ ಟ್ರಸ್ಟ್, ಅಭಿಮಾನಿ ಬಳಗ, ಸವಿತಾ ಸಮಾಜ, ಶ್ರೀಗಂಧ ಹಾಗೂ ರಾಷ್ಟ್ರಭಕ್ತರ ಬಳಗದ ವತಿಯಿಂದ ಈಶ್ವರಪ್ಪ ಅವರ ನಿವಾಸದ ಆವರಣದಲ್ಲಿ ಜರ್ಮನ್ ಟೆಂಟ್ ನಿರ್ಮಿಸಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜನ್ಮದಿನದ ಅಂಗವಾಗಿ ಬೆಳಿಗ್ಗೆ 7 ಗಂಟೆಗೆ ರುದ್ರ ಪಾರಾಯಣ ನಡೆಯಲಿದ್ದು, 400ಕ್ಕೂ ಹೆಚ್ಚು ಅರ್ಚಕರಿಂದ ದುರ್ಗಾ ಪಾರಾಯಣ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ 600ಕ್ಕೂ ಹೆಚ್ಚು ಮಹಿಳೆಯರಿಂದ ಏಕಕಾಲದಲ್ಲಿ ಭಜನಾ ಗಾಯನ ನಡೆಯಲಿದೆ. ಈಗಾಗಲೇ ರಕ್ತದಾನ ಶಿಬಿರ ಆರಂಭವಾಗಿದ್ದು, ಸಸಿ ನೆಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ.

ಕಾರ್ಯಕ್ರಮದಲ್ಲಿ Vishwaprasanna Teertha Swamiji ಸೇರಿದಂತೆ ಪೇಜಾವರ ಮಠದ ಸ್ವಾಮೀಜಿ, ಬೆಕ್ಕಿನಕಲ್ಮಠದ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ಬಿಳಕಿ ಮಠದ ಸ್ವಾಮೀಜಿ ಸೇರಿದಂತೆ ಐವರು ಮಠಾಧೀಶರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.

ಈಶ್ವರಪ್ಪ ಅವರ ಜನ್ಮದಿನವನ್ನು ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಚಟುವಟಿಕೆಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ಮತ್ತು ವಿವಿಧ ಸಂಘಟನೆಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.

Hindu Tiger Eshwarappa's 78th birthday: A grand celebration with religious programs 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close