ಶಿವಮೊಗ್ಗ ನಗರದಲ್ಲಿ ಭಾರಿ ವಾಹನಗಳಿಗೆ ‘ನೋ ಎಂಟ್ರಿ’ : ಜಿಲ್ಲಾಧಿಕಾರಿಯಿಂದ ಅಧಿಸೂಚನೆ-'No entry' for heavy vehicles in Shivamogga city: Notification from the District Collector

 SUDDILIVE || SHIVAMOGGA

ಶಿವಮೊಗ್ಗ ನಗರದಲ್ಲಿ ಭಾರಿ ವಾಹನಗಳಿಗೆ ‘ನೋ ಎಂಟ್ರಿ’ : ಜಿಲ್ಲಾಧಿಕಾರಿಯಿಂದ ಅಧಿಸೂಚನೆ-'No entry' for heavy vehicles in Shivamogga city: Notification from the District Collector    

No, entry

ಶಿವಮೊಗ್ಗ, ಜೂನ್ 8: ಶಿವಮೊಗ್ಗ ನಗರದ ಪ್ರಮುಖ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಿ ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಭುಲಿಮಗ ಕವಳಿಕಟ್ಟಿ ಅವರು ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಅಧಿಸೂಚನೆ ಹೊರಡಿಸಿದ್ದಾರೆ.

ಶಿವಮೊಗ್ಗ ನಗರದ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಸಾರ್ವಜನಿಕ ವಾಹನಗಳು ಹಾಗೂ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವುದನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಅಧಿಸೂಚನೆಯ ಪ್ರಕಾರ, ಆಯನೂರು ಗೇಟ್ ಸಿಗ್ನಲ್‌ನಿಂದ ಅಶೋಕ್ ಸರ್ಕಲ್‌ವರೆಗೆ, ಅಲ್ಲಿಂದ ಹೆಲಿಪ್ಯಾಡ್ ಸರ್ಕಲ್, ನಾಗರ ಕೆರೆ, ಹೊಸೂರು ಹಾಗೂ ಶರಾವತಿ ನಗರ ಭಾಗಗಳಲ್ಲಿ ನಾಲ್ಕು ರಸ್ತೆಗಳ ಸಂಪರ್ಕ ಪ್ರದೇಶಗಳಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಅದೇ ರೀತಿ ಆಯನೂರು ಗೇಟ್ ಸಿಗ್ನಲ್‌ನಿಂದ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಬರುವ ವಾಹನಗಳು ಹಾಗೂ ಅಶೋಕ್ ಸರ್ಕಲ್ ಕಡೆಗೆ ಸಾಗುವ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.

ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳು 1989ರ ನಿಯಮ 221(3)(5)ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಶಿವಮೊಗ್ಗ ನಗರದ ಪ್ರಮುಖ ಸಂಚಾರ ಪ್ರದೇಶಗಳಲ್ಲಿ ಭಾರಿ ವಾಹನಗಳ ಪ್ರವೇಶಕ್ಕೆ ‘ನೋ ಎಂಟ್ರಿ’ ಜಾರಿಗೊಳಿಸಲಾಗಿದೆ.

ಈ ಅಧಿಸೂಚನೆ 2026ರ ಜೂನ್ 8ರಿಂದಲೇ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ.

No entry' for heavy vehicles in Shivamogga city: Notification from the District Collector

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close