ತುಂಗ ನದಿ ಪಾತ್ರದ ಜನರೇ ಎಚ್ಚರ, ಎಚ್ಚರ!People of the Tunga River basin, be careful, be careful!

SUDDILIVE || SHIVAMOGGA

ತುಂಗ ನದಿ ಪಾತ್ರದ ಜನರೇ ಎಚ್ಚರ, ಎಚ್ಚರ!People of the Tunga River basin, be careful, be careful!     

Tunga, river

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲಲ್ಲಿ ಮುಂಗಾರಿನ ಆರ್ಭಟ ಜೋರಾಗಿದೆ! ತುಂಗಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ವರುಣದೇವ ಅಕ್ಷರಶಃ ರೌದ್ರಾವತಾರ ತಾಳುವ ಮುನ್ಸೂಚನೆ ಸಿಕ್ಕಿದ್ದು, ಡ್ಯಾಂಗೆ ಯಾವುದೇ ಕ್ಷಣದಲ್ಲಾದರೂ ಭಾರಿ ಪ್ರಮಾಣದ ಒಳಹರಿವು ಹರಿದುಬರುವ ಸಾಧ್ಯತೆ ಇದೆ.

ಜಲಾನಯನ ಪ್ರದೇಶದಲ್ಲಿ ಸುರಿಯಲಿರುವ ಮಹಾಮಳೆಯಿಂದಾಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ತಕ್ಷಣ, ಮುನ್ನೆಚ್ಚರಿಕೆ ಕ್ರಮವಾಗಿ ಯಾವ ಕ್ಷಣದಲ್ಲಾದರೂ ತುಂಗಾ ಜಲಾಶಯದ ಕ್ರೆಸ್ಟ್ ಗೇಟ್‌ಗಳನ್ನು ಓಪನ್ ಮಾಡಿ ನದಿಗೆ ನೀರನ್ನು ಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗರ್ಜಿಸುತ್ತಾ ನುಗ್ಗಲಿರುವ ತುಂಗಾ ನದಿಯ ಅಬ್ಬರಕ್ಕೆ ನದಿ ಪಾತ್ರದ ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದೆ!

ಅಧಿಕಾರಿಗಳಿಂದ ಹೈ-ಅಲರ್ಟ್ ಘೋಷಣೆ!

ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಅವರು ನದಿ ತಟದ ಜನರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಸಂದೇಶ ರವಾನಿಸಿದ್ದಾರೆ:

ನದಿ ತಟಕ್ಕೆ ಹೋಗಬೇಡಿ- ತುಂಗಾ ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ಬರುವ ಎಲ್ಲಾ ಗ್ರಾಮಸ್ಥರು ನದಿಯ ಹತ್ತಿರ ಸುಳಿಯಬಾರದು.

ದನಕರುಗಳ ರಕ್ಷಣೆ ಮುಖ್ಯ- ತಗ್ಗು ಪ್ರದೇಶಗಳಲ್ಲಿ ಹಾಗೂ ನದಿ ಪಾತ್ರದಲ್ಲಿ ದನಕರುಗಳನ್ನು, ಸಾಕು ಪ್ರಾಣಿಗಳನ್ನು ಮೇಯಿಸಲು ಬಿಡುವ ಯಾವುದೇ ಸಾಹಸಕ್ಕೆ ಕೈಹಾಕಬೇಡಿ.

ಸುರಕ್ಷಿತ ಸ್ಥಳಗಳಿಗೆ ಧಾವಿಸಿ- ಪ್ರವಾಹದ ಮುನ್ಸೂಚನೆ ಸಿಗುತ್ತಿದ್ದಂತೆ ತಗ್ಗು ಪ್ರದೇಶದಲ್ಲಿರುವ ಜನರು ತಕ್ಷಣವೇ ತಮ್ಮ ಅಗತ್ಯ ವಸ್ತುಗಳೊಂದಿಗೆ ಎತ್ತರದ ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು.

ಗಮನಿಸಿ-ಪ್ರಕೃತಿಯ ವಿಕೋಪಕ್ಕೆ ಸಿಲುಕುವ ಮುನ್ನವೇ ಎಚ್ಚೆತ್ತುಕೊಳ್ಳಿ. ನಿಮ್ಮ ಜೀವ ಮತ್ತು ಜಾನುವಾರುಗಳ ರಕ್ಷಣೆ ನಿಮ್ಮ ಕೈಯಲ್ಲಿದೆ. ಅಧಿಕಾರಿಗಳ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಿ, ಸುರಕ್ಷಿತವಾಗಿರಿ!

People of the Tunga River basin, be careful, be careful!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close