ಕಾಯಕ ಸೇತು ಮೂಲಕ ಮಹಿಳೆಯರಿಗೆ ಬೃಹತ್ ಉದ್ಯೋಗಾವಕಾಶ- Huge employment opportunities for women through Kayak Setu

SUDDILIVE || SHIVAMOGGA

ಕಾಯಕ ಸೇತು ಮೂಲಕ ಮಹಿಳೆಯರಿಗೆ ಬೃಹತ್ ಉದ್ಯೋಗಾವಕಾಶ- Huge employment opportunities for women through Kayak Setu   

Huge, emplyment


ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ‘ಕಾಯಕ ಸೇತು’ ಉಚಿತ ಜಾಬ್ ಪೋರ್ಟಲ್ ವತಿಯಿಂದ ಬೃಹತ್ ಉದ್ಯೋಗ ನೇಮಕಾತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಫೋನ್ ತಯಾರಿಕಾ ಬಹುರಾಷ್ಟ್ರೀಯ ಕಂಪನಿಯಲ್ಲಿ ಖಾಲಿ ಇರುವ 2,000ಕ್ಕೂ ಹೆಚ್ಚು ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳ ನೇಮಕಾತಿಗಾಗಿ ಶಿವಮೊಗ್ಗದಲ್ಲಿ ಸಂದರ್ಶನ ಆಯೋಜಿಸಲಾಗಿದೆ.

ಏಳು ತಿಂಗಳ ಹಿಂದೆ ಆರಂಭಗೊಂಡ ‘ಕಾಯಕ ಸೇತು’ ಜಾಬ್ ಪೋರ್ಟಲ್ ಮೂಲಕ ಈಗಾಗಲೇ ನೂರಾರು ಯುವಕ-ಯುವತಿಯರು ಉದ್ಯೋಗ ಪಡೆದಿದ್ದು, ಅದರ ಮುಂದುವರಿದ ಭಾಗವಾಗಿ ಈ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಬೆಂಗಳೂರಿನ ಪ್ರಸಿದ್ಧ ಎಂಎನ್‌ಸಿ ಕಂಪನಿಯು ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಲಿದ್ದು, ಸಂದರ್ಶನದಲ್ಲಿ ಆಯ್ಕೆಯಾದವರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಿಸಲಾಗುವುದು. ಉದ್ಯೋಗಕ್ಕೆ ಆಯ್ಕೆಯಾದವರಿಗೆ ಉಚಿತ ಊಟ, ವಸತಿ, ಕ್ಯಾಬ್ ಸೌಲಭ್ಯ, ಪಿಎಫ್, ಇಎಸ್‌ಐ ಹಾಗೂ 24 ಗಂಟೆಗಳ ವೈದ್ಯಕೀಯ ಸೇವೆಯನ್ನು ಕಂಪನಿಯೇ ಒದಗಿಸಲಿದೆ.

10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮಾ ಅಥವಾ ಯಾವುದೇ ಪದವಿ (ಪಾಸ್ ಅಥವಾ ಫೇಲ್) ಹೊಂದಿರುವ 18 ರಿಂದ 34 ವರ್ಷದೊಳಗಿನ ಮಹಿಳೆಯರು ಸಂದರ್ಶನದಲ್ಲಿ ಭಾಗವಹಿಸಬಹುದು.

ಜೂನ್ 8, 9, 10, 11 ಹಾಗೂ 12 ರಂದು ಶಿವಮೊಗ್ಗ ನಗರದ ವಿನೋಬನಗರದಲ್ಲಿರುವ ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣದ ವಲಯ-01, 2ನೇ ಮಹಡಿಯಲ್ಲಿರುವ ಡಾ. ಧನಂಜಯ ಸರ್ಜಿ ಅವರ ಜನಪರ ಜೀವಪರ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಮುನ್ನ ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 93797 22233 ಹಾಗೂ 98800 05533 ಸಂಖ್ಯೆಗಳ ಸಂಪರ್ಕಿಸಬಹುದಾಗಿದೆ.

ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ನಿರುದ್ಯೋಗಿ ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ. ಧನಂಜಯ ಸರ್ಜಿ ಮನವಿ ಮಾಡಿದ್ದಾರೆ.

Huge employment opportunities for women through Kayak Setu

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close