ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮಗಳೇ ಹೆಚ್ಚು; ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು– ಈಶ್ವರಪ್ಪ ಸ್ಫೋಟಕ ಭವಿಷ್ಯ- There are many dissatisfied souls in Congress; the government can fall at any time - Eshwarappa's explosive prediction

 SUDDILIVE || SHIVAMOGGA

ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮಗಳೇ ಹೆಚ್ಚು; ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು– ಈಶ್ವರಪ್ಪ ಸ್ಫೋಟಕ ಭವಿಷ್ಯ- There are many dissatisfied souls in Congress; the government can fall at any time - Eshwarappa's explosive prediction    

Eshwarappa, dissatisfaction



ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ಭವಿಷ್ಯದ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಮಹತ್ವದ ಹಾಗೂ ಸ್ಫೋಟಕ ಹೇಳಿಕೆ ನೀಡಿದ್ದು, "ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮಗಳು ತುಂಬಿಕೊಂಡಿವೆ. ಅವುಗಳನ್ನು ತೃಪ್ತಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು" ಎಂದು ಭವಿಷ್ಯ ನುಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಈಗಾಗಲೇ ಮೊದಲ ವಿಕೆಟ್ ಬಿದ್ದಿದ್ದು, "ಮೊದಲ ವಿಕೆಟ್ ರಾಮಲಿಂಗ ರೆಡ್ಡಿಯವರದ್ದು. ಇದು ಕೇವಲ ಆರಂಭ ಮಾತ್ರ. ಪಕ್ಷದೊಳಗೆ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ" ಎಂದು ಹೇಳಿದರು.

"ಡಿಕೆಶಿ ದರ್ಬಾರ್ ಆರಂಭವಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ರಾಮಲಿಂಗ ರೆಡ್ಡಿಯವರ ರಾಜೀನಾಮೆ ಕೇವಲ ವೈಯಕ್ತಿಕ ಕಾರಣಗಳಿಂದಾಗಿದೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ. ಇದರ ಹಿಂದೆ ಯಾರೋ ಇದ್ದಾರೆ ಎಂಬ ಅನುಮಾನ ಕಾಡುತ್ತಿದೆ" ಎಂದು ಈಶ್ವರಪ್ಪ ಸಂಶಯ ವ್ಯಕ್ತಪಡಿಸಿದರು.

ಮುಂದುವರಿದು, "ರಾಜ್ಯ ಸರ್ಕಾರ ಎರಡು ವರ್ಷ ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸ ನನಗಿಲ್ಲ. ಕಾಂಗ್ರೆಸ್‌ನ ಒಳಜಗಳ ಹಾಗೂ ಅತೃಪ್ತರ ಅಸಮಾಧಾನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ" ಎಂದು ಟೀಕಿಸಿದರು.

ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದುತ್ವವಾದಿಗಳಿಗೆ ಕರೆ ನೀಡಿದ ಅವರು, "ಯಾವಾಗ ಬೇಕಾದರೂ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರೂ ಈಗಿನಿಂದಲೇ ಸಜ್ಜಾಗಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಹಿಂದುತ್ವವಾದಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಆಶಯ" ಎಂದು ಹೇಳಿದರು.

ಈಶ್ವರಪ್ಪ ಅವರ ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಸರ್ಕಾರದ ಸ್ಥಿರತೆ ಕುರಿತ ರಾಜಕೀಯ ವಾಗ್ವಾದಕ್ಕೆ ಮತ್ತಷ್ಟು ಇಂಧನ ತುಂಬಿದೆ.

ಮಾವಿನ ಮೇಳ 

APMC ಆವರಣದಲ್ಲಿ ಮೂರು ದಿನಗಳವರೆಗೆ ನಡೆಯುತ್ತಿರುವ ಮಾವಿನ ಮೇಳ ಸರ್ಕಾರದಿಂದ ಹಣ ತಂದು ಮಾಡುವ ಕೆಲಸವಾಗಿದೆ. ಇಲ್ಲಿ ಯಾವುದೇ ರಾಜಕೀಯ ಪಕ್ಷಗಳಿರಲ್ಲ. ಇಲ್ಲಿ ರೈತರ ಅಭಿವೃದ್ಧಿ ಮುಖ್ಯವಾಗಿದೆ. ಅದನ್ನ ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ಮಾಡಿದ್ದಾರೆ ಎಂದರು. 

There are many dissatisfied souls in Congress; the government can fall at any time - Eshwarappa's explosive prediction

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close