SUDDILIVE || SHIVAMOGGA
ಕೂಡ್ಲಿಗೆರೆಯಲ್ಲಿ ಹುಲ್ಲಿನ ಬಣವೆಯಲ್ಲಿ ಪತ್ತೆಯಾದ 10 ಅಡಿ ಉದ್ದದ ಹೆಬ್ಬಾವು ಸುರಕ್ಷಿತ ರಕ್ಷಣೆ-10-foot-long python found in a haystack in Kudligere, safe and sound
ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮದ ರಾಜಣ್ಣ ಅವರ ಮನೆಯ ಆವರಣದಲ್ಲಿದ್ದ ಹುಲ್ಲಿನ ಬಣವೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೇರಿಕೊಂಡಿದ್ದು ಅದನ್ನ ರಕ್ಷಿಸಲಾಗಿದೆ. ಮನೆಯವರು ಹುಲ್ಲು ತೆಗೆಯುವ ವೇಳೆ ಹಾವು ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳೀಯರು ಎಚ್ಚರಿಕೆ ವಹಿಸಿ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದರು.
ಮಾಹಿತಿ ತಿಳಿಯುತ್ತಿದ್ದಂತೆ ಸ್ನೇಕ್ ರೆಸ್ಕ್ಯೂವರ್ ಬೆನ್ಸನ್ ಸುರಗಿತೋಪು (ಭದ್ರಾವತಿ) ಸ್ಥಳಕ್ಕೆ ಆಗಮಿಸಿ ಅತ್ಯಂತ ಜಾಗರೂಕತೆಯಿಂದ ಹೆಬ್ಬಾವನ್ನು ರಕ್ಷಣೆ ಮಾಡಿದರು. ಸುಮಾರು 10 ಅಡಿ ಉದ್ದ ಹಾಗೂ 15 ಕೆಜಿ ತೂಕ ಹೊಂದಿದ್ದ ಈ ಹೆಬ್ಬಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.
ಬಳಿಕ ಅರಣ್ಯ ಇಲಾಖೆಯ ಮಾರ್ಗಸೂಚಿಯಂತೆ ಹೆಬ್ಬಾವನ್ನು ಸೂಕ್ತ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು. ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿದ ಸ್ನೇಕ್ ರೆಸ್ಕ್ಯೂವರ್ ಬೆನ್ಸನ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಜೀವಿಗಳು ಜನವಸತಿ ಪ್ರದೇಶಗಳಿಗೆ ಬಂದಾಗ ಅವುಗಳನ್ನು ಹೊಡೆಯಲು ಅಥವಾ ಕೊಲ್ಲಲು ಯತ್ನಿಸದೆ, ತಕ್ಷಣ ಅರಣ್ಯ ಇಲಾಖೆ ಅಥವಾ ತರಬೇತಿ ಪಡೆದ ಸ್ನೇಕ್ ರೆಸ್ಕ್ಯೂವರ್‌ಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
10-foot-long python found in a haystack in Kudligere, safe and sound
