ಶಿವಮೊಗ್ಗದಲ್ಲಿ ನೀರಿನ ಕಂದಾಯ ಬಾಕಿದಾರರಿಗೆ 7 ದಿನಗಳ ಗಡುವು; ಜು. 4ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ-7-day deadline for water revenue arrears in Shivamogga; Power outage in many areas on July 4

 SUDDILIVE || SHIVAMOGGA

ಶಿವಮೊಗ್ಗದಲ್ಲಿ ನೀರಿನ ಕಂದಾಯ ಬಾಕಿದಾರರಿಗೆ 7 ದಿನಗಳ ಗಡುವು; ಜು. 4ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ-7-day deadline for water revenue arrears in Shivamogga; Power outage in many areas on July 4    
Power, water

ಶಿವಮೊಗ್ಗ, ಜು. 3: ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯ ನೀರಿನ ಬಳಕೆದಾರರು ಹಾಗೂ ಆಸ್ತಿ ಮಾಲೀಕರು ನೀರಿನ ಕಂದಾಯ ಬಾಕಿ ಉಳಿಸಿಕೊಂಡಿದ್ದರೆ, 7 ದಿನಗಳೊಳಗೆ ಕಡ್ಡಾಯವಾಗಿ ಪಾವತಿಸಬೇಕು ಎಂದು ಮಹಾನಗರಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೂಚಿಸಿದ್ದಾರೆ.

ನಿಗದಿತ ಅವಧಿಯೊಳಗೆ ಬಾಕಿ ಮೊತ್ತ ಪಾವತಿಸದಿದ್ದಲ್ಲಿ, ಸಂಬಂಧಿತ ಮನೆ ಮತ್ತು ಕಟ್ಟಡಗಳ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ವಿದ್ಯುತ್ ವ್ಯತ್ಯಯ

ಇದೇ ವೇಳೆ, ಜುಲೈ 4ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಶಿವಮೊಗ್ಗ ನಗರ ಮೆಸ್ಕಾಂ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ನಡೆಯಲಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಜಯನಗರ ಮುಖ್ಯರಸ್ತೆ, ಮೆಟ್ರೋ ಆಸ್ಪತ್ರೆ ರಸ್ತೆ, ನೆಹರೂ ಕ್ರೀಡಾಂಗಣ ರಸ್ತೆ, ಸರ್ವೋದಯ ಶಾಲೆ ರಸ್ತೆ, ಬಸವನಗುಡಿ, ಶಿವಮೂರ್ತಿ ಸರ್ಕಲ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

7-day deadline for water revenue arrears in Shivamogga; Power outage in many areas on July 4

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close