ಸೀಗೆಹಟ್ಟಿಯ ಕೆರೆದುರ್ಗಮ್ಮನ ಕೆರೆಯಲ್ಲಿ ಯುವಕ ಆತ್ಮಹತ್ಯೆ- A young man committed suicide in Keredurgamma Lake in Seegehatti.

SUDDILIVE || SHIVAMOGGA

ಸೀಗೆಹಟ್ಟಿಯ ಕೆರೆದುರ್ಗಮ್ಮನ ಕೆರೆಯಲ್ಲಿ ಯುವಕ ಆತ್ಮಹತ್ಯೆ- A young man committed suicide in Keredurgamma Lake in Seegehatti.   

Kere, Durgamma

ಶಿವಮೊಗ್ಗ, ಜು.16: ಯುವಕನೋರ್ವ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸಿಗೇಹಟ್ಟಿ ಸಮೀಪದ ಕೆರೆದುರ್ಗಮ್ಮನ ಕೇರಿಯಲ್ಲಿ ನಡೆದಿದೆ. ಆರೋಗ್ಯ ಸಮಸ್ಯೆಯ ಹಿನ್ನಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. 

ಮೃತರನ್ನು ಭುವನ್ ಸಿಂಗ್ (22) ಎಂದು ಗುರುತಿಸಲಾಗಿದೆ. ಅವರು ನಗರದ ಸೆಂಟ್ರಲ್ ಲೈಬ್ರರಿಯಲ್ಲಿ ಹೊರಗುತ್ತಿಗೆ (ಔಟ್‌ಸೋರ್ಸಿಂಗ್) ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅವಿವಾಹಿತರಾಗಿದ್ದ ಭುವನ್ ಸಿಂಗ್ ಅವರಿಗೆ ಕಳೆದ ಕೆಲವು ದಿನಗಳಿಂದ ಹೊಟ್ಟೆ ನೋವಿನ ಸಮಸ್ಯೆ ಕಾಡುತ್ತಿತ್ತು ಎನ್ನಲಾಗಿದೆ.

ಆರೋಗ್ಯ ಸಮಸ್ಯೆಯಿಂದ ಬೇಸತ್ತು ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

A young man committed suicide in Keredurgamma Lake in Seegehatti

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close