SUDDILIVE || SHIKARIPURA
ಶಿಕಾರಿಪುರ: ಕುಮದ್ವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ-Shikaripura: Body of an unidentified person found in Kumadvati river
ಜು.16: ತಾಲೂಕಿನ ಕೊಟ್ಟ ಗ್ರಾಮದ ಸಮೀಪ ಹರಿಯುವ ಕುಮದ್ವತಿ ನದಿ ದಂಡೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಮೃತರ ಗುರುತು ಪತ್ತೆಗಾಗಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಸಾರ್ವಜನಿಕರ ಸಹಕಾರ ಕೋರಿದೆ.
ಗುರುವಾರ (ಜುಲೈ 16) ರಂದು ಕುಮದ್ವತಿ ನದಿಯಲ್ಲಿ ನೀರಿನೊಂದಿಗೆ ಹರಿದು ಬಂದಿದ್ದ ಮೃತದೇಹವನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯು ಸುಮಾರು 50 ರಿಂದ 55 ವರ್ಷದೊಳಗಿನ ಪುರುಷ ಆಗಿದ್ದು, ಮೃತದೇಹದ ಮೇಲೆ ನೀಲಿ ಬಣ್ಣದ ಚಡ್ಡಿ ಹಾಗೂ ಬಿಳಿ ಬಣ್ಣದ ಚೆಕ್ಸ್ ಅಂಗಿ ಧರಿಸಿರುವುದು ಕಂಡುಬಂದಿದೆ.
ಮೃತ ವ್ಯಕ್ತಿಯ ಗುರುತು ಇದುವರೆಗೆ ಪತ್ತೆಯಾಗಿಲ್ಲ. ಆದ್ದರಿಂದ ಮೃತರನ್ನು ಗುರುತಿಸುವವರು ಅಥವಾ ಅವರ ಸಂಬಂಧಿಕರು, ವಾರಸುದಾರರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ತಕ್ಷಣವೇ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9480803366 ಅನ್ನು ಸಂಪರ್ಕಿಸಬಹುದಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತರ ಗುರುತು ಪತ್ತೆ ಹಾಗೂ ಸಾವಿನ ಕುರಿತು ಮುಂದಿನ ತನಿಖೆ ನಡೆಸುತ್ತಿದ್ದಾರೆ.
Shikaripura: Body of an unidentified person found in Kumadvati river

