ಕಸ್ತೂರಬಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ದೂರು? ಭೇಟಿ ನೀಡಿ ಪರಿಶೀಲನೆ ನಡೆಸುದ್ರಾ ಮಕ್ಕಳ ರಕ್ಷಣಾ ಸಮಿತಿ?Complaint against the principal of Kasturba Pre-University College? Did the Child Protection Committee visit and inspect?

SUDDILIVE || SHIVAMOGGA

ಕಸ್ತೂರಬಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ದೂರು? ಭೇಟಿ ನೀಡಿ ಪರಿಶೀಲನೆ ನಡೆಸುದ್ರಾ ಮಕ್ಕಳ ರಕ್ಷಣಾ ಸಮಿತಿ?Complaint against the principal of Kasturba Pre-University College? Did the Child Protection Committee visit and inspect?     

Principal, harrassment

ಶಿವಮೊಗ್ಗ: ಜಿಲ್ಲೆಯ ಕಸ್ತೂರಬಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿನಿಯರಿಂದ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ (Child Protection Committee) ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ. 

ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಪ್ರಾಂಶುಪಾಲರ ವರ್ತನೆ ಕುರಿತು ಮಕ್ಕಳ ರಕ್ಷಣಾ ಸಮಿತಿಗೆ ದೂರು ನೀಡಿದ್ದರೆಂಬ ಮಾಹಿತಿ ದೊರೆತಿದ್ದು, ಅದರ ಅನ್ವಯ ಸಮಿತಿಯ ಸದಸ್ಯರು ಕಾಲೇಜಿಗೆ ತೆರಳಿ ವಿದ್ಯಾರ್ಥಿನಿಯರೊಂದಿಗೆ ಹಾಗೂ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

"ನೆನ್ನೆ ಸಮಿತಿಯವರು ಕಾಲೇಜಿಗೆ ಬಂದು ವಿಚಾರಣೆ ಮಾಡಿಕೊಂಡು ಹೋಗಿದ್ದಾರೆ" ಎಂಬ ಮಾಹಿತಿ ಲಭ್ಯವಾಗಿದೆ.   "ಕಸ್ತೂರ್ಬಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಮಕ್ಕಳ ರಕ್ಷಣಾ ಸಮಿತಿಗೆ ದೂರು ನೀಡಿದ್ದಾರೆ" ಎಂದು ಹೇಳಲಾಗಿದೆ.

ಇದೇ ವೇಳೆ, ಕಾಲೇಜಿನಲ್ಲಿ ದೂರು ಸಲ್ಲಿಸಲು ಅನುಕೂಲವಾಗುವಂತೆ ಮಾಹಿತಿ ಫಲಕ (Complaint Board) ಅಳವಡಿಸಿರುವುದನ್ನೂ  ಉಲ್ಲೇಖಿಸಲಾಗಿದೆ. ಈ ಫಲಕದ ಮೂಲಕ ವಿದ್ಯಾರ್ಥಿನಿಯರು ತಮ್ಮ ಅಹವಾಲು ದಾಖಲಿಸಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಲೈಂಗಿಕ ದೌರ್ಜನ್ಯದ ಬಗ್ಗೆ ಸಮಿತಿಯವರು ವಿದ್ಯಾರ್ಥಿನಿಯರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, "ಎಲ್ಲಾ ಮಕ್ಕಳ ಹತ್ತಿರ ಮಾತನಾಡಿದ್ದೇವೆ. ಯಾವುದೇ ತೊಂದರೆ ಕಂಡುಬಂದಿಲ್ಲ" ಎಂದು ಹೇಳಿ ತೆರಳಿದ್ದಾರೆ ಎಂಬ ಮಾಹಿತಿ ಉಲ್ಲೇಖಿಸಲಾಗಿದೆ. ಅಲ್ಲದೆ, ಕಾಲೇಜಿನ ಪ್ರಾಂಶುಪಾಲರ ಹೆಸರು ರವಿಕುಮಾರ್ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ದೂರು ದಾಖಲಾಗಿದೆ. 

ಪ್ರಭಾರ ಪ್ರಾಂಶುಪಾಲರಾದ ರವಿ ಕುಮಾರ್ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿದೆ. ಈ ಹಿಂದೆ ಶಿಕ್ಷಕಿಯೊಬ್ಬರು ಇವರ ವಿರುದ್ಧ ದೂರು ಕೇಳಿ ಬಂದಿತ್ತು. ಉಲ್ಲೇಖಿಸಲಾದ ಆರೋಪಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಅಧಿಕೃತ ದೃಢೀಕರಣ ಇದುವರೆಗೆ ಲಭ್ಯವಾಗಿಲ್ಲವಾದರೂ. ಮಕ್ಕಳ ರಕ್ಷಣಾ ಸಮಿತಿಯ ಭೇಟಿ, ವಿಚಾರಣೆಯ ಉದ್ದೇಶ ಹಾಗೂ ಅದರ ಅಂತಿಮ ವರದಿ ಕುರಿತು ಸಹ ಅಧಿಕೃತ ಮಾಹಿತಿ ಪ್ರಕಟವಾಗಬೇಕಿದೆ. 

ಆದ್ದರಿಂದ, ಈ ಪ್ರಕರಣದ ಕುರಿತು ಅಧಿಕಾರಿಗಳ ಅಧಿಕೃತ ಸ್ಪಷ್ಟನೆ ಹಾಗೂ ತನಿಖಾ ವರದಿ ಹೊರಬಂದ ಬಳಿಕವೇ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ.

Complaint against the principal of Kasturba Pre-University College? Did the Child Protection Committee visit and inspect?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close