ಶಿವಮೊಗ್ಗ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಅಂತಿಮ ಆಯ್ಕೆ ಪಟ್ಟಿ ಪ್ರಕಟ-Final selection list of Anganwadi workers and helpers in Shivamogga district published

 SUDDILIVE || SHIVAMOGGA

ಶಿವಮೊಗ್ಗ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಅಂತಿಮ ಆಯ್ಕೆ ಪಟ್ಟಿ ಪ್ರಕಟ-Final selection list of Anganwadi workers and helpers in Shivamogga district published    

Anganwadi, worker

ಶಿವಮೊಗ್ಗ, ಜು.21: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಶಿವಮೊಗ್ಗ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ತಾಲೂಕುಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಪ್ರಕಟಿಸಲಾಗಿದ್ದು, ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ತಮ್ಮ ತಾಲೂಕಿನ ಪ್ರಕಟಿತ ಪಟ್ಟಿಯನ್ನು ಪರಿಶೀಲಿಸಬಹುದು.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆಯ್ಕೆಯಾದ ಹುದ್ದೆಗಳ ವಿವರ ಹೀಗಿದೆ:

ಶಿವಮೊಗ್ಗ ತಾಲೂಕು: 14 ಕಾರ್ಯಕರ್ತೆಯರು, 77 ಸಹಾಯಕಿಯರು


ಸಾಗರ ತಾಲೂಕು: 2 ಕಾರ್ಯಕರ್ತೆಯರು, 52 ಸಹಾಯಕಿಯರು


ಭದ್ರಾವತಿ ತಾಲೂಕು: 18 ಕಾರ್ಯಕರ್ತೆಯರು, 56 ಸಹಾಯಕಿಯರು


ಸೊರಬ ತಾಲೂಕು: 1 ಕಾರ್ಯಕರ್ತೆ, 37 ಸಹಾಯಕಿಯರು


ಶಿಕಾರಿಪುರ ತಾಲೂಕು: 1 ಕಾರ್ಯಕರ್ತೆ, 22 ಸಹಾಯಕಿಯರು


ತೀರ್ಥಹಳ್ಳಿ ತಾಲೂಕು: 11 ಕಾರ್ಯಕರ್ತೆಯರು, 50 ಸಹಾಯಕಿಯರು


ಹೊಸನಗರ ತಾಲೂಕು: 6 ಕಾರ್ಯಕರ್ತೆಯರು, 114 ಸಹಾಯಕಿಯರು


ಒಟ್ಟಾರೆ ಜಿಲ್ಲೆಯಲ್ಲಿ 53 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 408 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳು ಇಲಾಖೆಯಿಂದ ನೀಡಲಾಗುವ ಮುಂದಿನ ಸೂಚನೆಗಳಂತೆ ಅಗತ್ಯ ದಾಖಲೆಗಳ ಪರಿಶೀಲನೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Final selection list of Anganwadi workers and helpers in Shivamogga district published

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close