SUDDILIVE || SHIVAMOGGA
ತುಂಗಾ ಜಲಾಶಯಕ್ಕೆ ಭಾರೀ ಒಳಹರಿವು: ಸಂಜೆ ವೇಳೆಗೆ 46,385 ಕ್ಯೂಸೆಕ್‌ಗೆ ಏರಿಕೆ-Heavy inflow into Tunga reservoir: Increases to 46,385 cusecs by evening
ಶಿವಮೊಗ್ಗ: ಜಿಲ್ಲೆಯ ತುಂಗಾ ಜಲಾಶಯಕ್ಕೆ ಮಳೆಯ ಪರಿಣಾಮ ನೀರಿನ ಒಳಹರಿವು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಬೆಳಿಗ್ಗೆ 8 ಗಂಟೆಯ ವೇಳೆಗೆ ಜಲಾಶಯಕ್ಕೆ 29,987 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದರೆ, ಸಂಜೆ ವೇಳೆಗೆ ಅದು 46,385 ಕ್ಯೂಸೆಕ್ಗೆ ಏರಿಕೆಯಾಗಿದೆ.
ಬೆಳಿಗ್ಗೆ ಜಲಾಶಯದಿಂದ ನದಿಗೆ 27,760 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದ್ದು, ಒಟ್ಟು ಹೊರಹರಿವು 29,987 ಕ್ಯೂಸೆಕ್ ಇತ್ತು. ಆದರೆ ಸಂಜೆ ವೇಳೆಗೆ ಜಲಾಶಯದಿಂದ ಒಟ್ಟು 46,385 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಈ ಪೈಕಿ 43,305 ಕ್ಯೂಸೆಕ್ ನೀರನ್ನು ನೇರವಾಗಿ ತುಂಗಾ ನದಿಗೆ ಹರಿಸಲಾಗುತ್ತಿದೆ.
ಜಲಾಶಯದ ಒಳಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ ತಗ್ಗು ಪ್ರದೇಶದ ನಿವಾಸಿಗಳು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚಿಸಿದೆ. ನದಿಗೆ ಅನಗತ್ಯವಾಗಿ ಇಳಿಯದಂತೆ ಹಾಗೂ ನದಿತೀರದಲ್ಲಿ ಓಡಾಡುವುದನ್ನು ತಪ್ಪಿಸುವಂತೆ ಮನವಿ ಮಾಡಲಾಗಿದೆ.

