ಶಿವಮೊಗ್ಗದಲ್ಲಿ ಭೀಕರ ಘಟನೆ: ಗಾಂಜಾ ವಿರುದ್ಧ ಧ್ವನಿ ಎತ್ತಿದ ಅಜ್ಜಿ ಕೊಲೆ? ಮೊಮ್ಮಗ ಎಸ್ಕೇಪ್-Horrific incident in Shivamogga: Grandmother murdered for filing complaint against ganja, grandson escapes

 ಶಿವಮೊಗ್ಗದಲ್ಲಿ ಭೀಕರ ಘಟನೆ: ಗಾಂಜಾ ವಿರುದ್ಧ ಧ್ವನಿ ಎತ್ತಿದ ಅಜ್ಜಿ ಕೊಲೆ? ಮೊಮ್ಮಗ ಎಸ್ಕೇಪ್-Horrific incident in Shivamogga: Grandmother murdered for filing complaint against ganja, grandson escapes    

Horrific, incident


ಶಿವಮೊಗ್ಗ: ನಗರದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ಮನಕಲಕುವ ಘಟನೆ ನಡೆದಿದ್ದು, ಗಾಂಜಾ ಚಟದ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದ ಅಜ್ಜಿಯನ್ನು ಮೊಮ್ಮಗನೇ ಸೈಜುಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನ ಸುಶೀಲಮ್ಮ(65) ನಡೆದುಕೊಂಡು ಹೋಗುವಾಗ  ಮೊಮ್ಮಗನಾದ ಕಿಶೋರ್ (28) ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.  ಗಾಂಜಾ ವ್ಯಸನ ಹಾಗೂ ಅದರ ಚಟುವಟಿಕೆಗಳ ಬಗ್ಗೆ ಅಜ್ಜಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸಚಿನ್, ಅಜ್ಜಿಯ ಮೇಲೆ ಸೈಜುಕಲ್ಲು ಎತ್ತಿಹಾಕಿ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬ ಸಹ ಗಾಂಜಾ ಮಾರಬೇಡ ಎಂದಿದ್ದಕ್ಕೆ ಗಾಡಿಯಲ್ಲಿ ಹಿಂದಿನಿಂದ ಗುದ್ದಿ ಕೆಳಕ್ಕೆ ಬೀಳಿಸಿ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾನೆ. ಪೊಲೀಸರಿಗೆ ಮಾಹಿರಿ ನೀಡಿದರೂ 112 ಗೆ ಹೇಳಿ ಎಂದು ವಾಪಾಸ್ ಕಳುಹಿಸಲಾಗಿದೆ.  ಕಲಹವೇ ಕ್ಷಣಾರ್ಧದಲ್ಲಿ ಭೀಕರ ಹತ್ಯೆಗೆ ತಿರುಗಿದ ಈ ಘಟನೆ ಆನಂದರಾವ್ ಬಡಾವಣೆಯ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಗಾಂಜಾ ಚಟದ ವಿರುದ್ಧ ಧ್ವನಿ ಎತ್ತಿದ ಅಜ್ಜಿಯನ್ನೇ ಮೊಮ್ಮಗ ಕೊಲೆ ಮಾಡಿರುವ ಘಟನೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯಾಗಿರುವ ಮೊಮ್ಮಗ ಸಚಿನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಈ ಮುರಿತು ಮಾಹಿತಿ ನೀಡಿದ  ನಿಖಿಲ್ ಬಿ  ದೂರು ನೀಡುವ ವೇಳೆ ಸಾಯಿಸಲಾಗಿದೆ ಎಂಬ ಮಾಹಿತಿ ಬಗ್ಗೆ ಪರಿಶೀಲಿಸಬೇಕು. ಆದರೆ ಅಜ್ಜಿ‌ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದು ಕಲ್ಲು ಎತ್ತಿ ಹಾಕಿ ಸಾಯಿಸಲಾಗಿದೆ. 

Horrific incident in Shivamogga: Grandmother murdered for filing complaint against ganja, grandson escapes 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close