ಡಾ. ಮುಹಮ್ಮದ್ ಅಕಿಲ್ ಶಿವಮೊಗ್ಗ ಅವರಿಗೆ ಕರ್ನಾಟಕ ರಾಜ್ಯ ಸಮಾಜ ರತ್ನ ಪ್ರಶಸ್ತಿ- Dr. Muhammad Akil Shivamogga gets Karnataka State Samaj Ratna Award

 SUDDILIVE || SHIVAMOGGA

ಡಾ. ಮುಹಮ್ಮದ್ ಅಕಿಲ್ ಶಿವಮೊಗ್ಗ ಅವರಿಗೆ ಕರ್ನಾಟಕ ರಾಜ್ಯ ಸಮಾಜ ರತ್ನ ಪ್ರಶಸ್ತಿ-  Dr. Muhammad Akil Shivamogga gets Karnataka State Samaj Ratna Award 

Karnataka, rathna

ಸಮಾಜದ ಒಳಿತಿಗಾಗಿ ಕೈಗೊಂಡಿರುವ ಸೇವಾ ಕಾರ್ಯಗಳು ಹಾಗೂ ಯುವ ಸಮುದಾಯದ ಅಭಿವೃದ್ಧಿಗೆ ಸಲ್ಲಿಸಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಯುವ ಉದ್ಯಮಿ ಹಾಗೂ ಸಮಾಜಸೇವಕರಾದ ಡಾ. ಮುಹಮ್ಮದ್ ಅಕಿಲ್ ಶಿವಮೊಗ್ಗ ಅವರಿಗೆ "ಕರ್ನಾಟಕ ರಾಜ್ಯ ಸಮಾಜ ರತ್ನ ಪ್ರಶಸ್ತಿ" ಪ್ರದಾನ ಮಾಡಲಾಗಿದೆ.

ದೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಮಾದಕ ದ್ರವ್ಯ ವಿರೋಧಿ ಕಾರ್ಯಾಗಾರ ಹಾಗೂ ಜಾಗೃತಿ ಸಮಾವೇಶದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಅವರನ್ನು ಸನ್ಮಾನಿಸಲಾಯಿತು.

ಆಂಟಿ ಡ್ರಗ್ ಕೌನ್ಸಿಲ್ ಆಫ್ ಇಂಡಿಯಾ (ಭಾರತೀಯ ಮಾದಕ ದ್ರವ್ಯ ವಿರೋಧ ಮಂಡಳಿ) ವತಿಯಿಂದ ಸಮಾಜಮುಖಿ ಚಟುವಟಿಕೆಗಳು, ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣ್ಯರನ್ನು ಗುರುತಿಸಿ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಅವರ ಶಿಫಾರಸಿನ ಮೇರೆಗೆ ಡಾ. ಮುಹಮ್ಮದ್ ಅಕಿಲ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಸಮಾಜದ ನೈತಿಕ ಮೌಲ್ಯಗಳನ್ನು ಕಾಪಾಡುವ ಹಾಗೂ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ಆಶಯವನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಯುವ ಉದ್ಯಮಿಯೊಬ್ಬರಿಗೆ ಈ ಗೌರವ ಲಭಿಸಿರುವುದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದಲ್ಲಿ ಭಾರತೀಯ ಮಾದಕ ದ್ರವ್ಯ ವಿರೋಧ ಮಂಡಳಿಯ ಜಿಲ್ಲಾಧ್ಯಕ್ಷರಾದ ಹನೀಫ್ ಸಾಹೇಬ್ ಪಾಜಪಳ್ಳ ಅವರು ಡಾ. ಮುಹಮ್ಮದ್ ಅಕಿಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಸಮಾಜಸೇವೆ, ಉದ್ಯಮಶೀಲತೆ ಹಾಗೂ ಯುವಜನರ ಮಾರ್ಗದರ್ಶನ ಎಂಬ ಮೂರು ಕ್ಷೇತ್ರಗಳಲ್ಲಿ ಸಮಾನವಾಗಿ ತಮ್ಮ ಛಾಪು ಮೂಡಿಸಿರುವ ಡಾ. ಮುಹಮ್ಮದ್ ಅಕಿಲ್ ಅವರ ಸಾಧನೆಗೆ ದೊರೆತ ಈ ರಾಜ್ಯಮಟ್ಟದ ಗೌರವವು ಶಿವಮೊಗ್ಗ ಜಿಲ್ಲೆಯ ಜನತೆಗೆ ಹೆಮ್ಮೆ ತಂದಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿರುವ ಅವರ ಸೇವಾ ಪಯಣ ಇನ್ನಷ್ಟು ಉನ್ನತ ಶಿಖರಗಳನ್ನು ತಲುಪಲಿ ಎಂದು ಕಾರ್ಯಕ್ರಮದಲ್ಲಿ ಶುಭ ಹಾರೈಸಲಾಯಿತು.

Dr. Muhammad Akil Shivamogga gets Karnataka State Samaj Ratna Award 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close